Select Your Language

Notifications

webdunia
webdunia
webdunia
webdunia

ಪ್ಯಾರಾಲಿಂಪಿಕ್ಸ್: ಬ್ಯಾಡ್ಮಿಂಟನ್ ನಲ್ಲಿ ಚಿನ್ನ ಗೆದ್ದ ಕೃಷ್ಣ ನಗಾರ್

webdunia
ಟೋಕಿಯೋ , ಭಾನುವಾರ, 5 ಸೆಪ್ಟಂಬರ್ 2021 (09:48 IST)
ಟೋಕಿಯೋ: ಪ್ಯಾರಾಲಿಂಪಿಕ್ಸ್ ನಲ್ಲಿ ಮತ್ತೊಂದು ಚಿನ್ನದ ಪದಕ ಭಾರತದ ಪಾಲಾಗಿದೆ. ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಭಾರತದ ಕೃಷ್ಣ ನಗಾರ್ ಚಿನ್ನ ಗೆದ್ದುಕೊಟ್ಟಿದ್ದಾರೆ.

Photo Courtesy: Google

ಇದೀಗ ತಾನೇ ಮುಕ್ತಾಯಗೊಂಡ ಸ್ಪರ್ಧೆಯಲ್ಲಿ ಹಾಂಗ್ ಕಾಂಗ್ ನ ಚು ಮುನ್ ಕೈ ವಿರುದ್ಧ ಗೆಲುವು ಸಾಧಿಸಿದ ಕೃಷ್ಣ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಇದರೊಂದಿಗೆ ಈ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಐದನೇ ಚಿನ್ನದ ಪದಕ ಲಭಿಸಿದೆ. ಒಟ್ಟು 19 ಪದಕ ಗಳಿಸಿರುವ ಭಾರತ ಪದಕ ಪಟ್ಟಿಯಲ್ಲಿ 24 ನೇ ಸ್ಥಾನಕ್ಕೆ ಏರಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ಯಾರಾಲಿಂಪಿಕ್ಸ್: ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಗೆದ್ದ ಕನ್ನಡಿಗ ಸುಹಾಸ್