ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನ ದ್ವಿತೀಯ ಇನಿಂಗ್ಸ್ ನಲ್ಲಿ ಔಟಾದ ಕೆಎಲ್ ರಾಹುಲ್ ಅಂಪಾಯರ್ ತೀರ್ಪಿನ ವಿರುದ್ಧ ಅಸಮಾಧಾನಗೊಂಡ ಘಟನೆ ನಡೆದಿದೆ.
ಉತ್ತಮವಾಗಿ ಆಡುತ್ತಿದ್ದ ರಾಹುಲ್ ಜೇಮ್ಸ್ ಆಂಡರ್ಸನ್ ಎಸೆತವನ್ನು ಹೊಡೆಯುವ ಯತ್ನದಲ್ಲಿ ಎಡವಿದರು. ಆಗ ಇಂಗ್ಲೆಂಡ್ ಆಟಗಾರರ ಮನವಿ ಪುರಸ್ಕರಿಸಿದ ಅಂಪಾಯರ್ ಔಟ್ ತೀರ್ಪು ನೀಡಿದರು. ಇದನ್ನು ಪ್ರಶ್ನಿಸಿ ರಾಹುಲ್ ರಿವ್ಯೂ ನೀಡಿದರು.
ಆಗ ಎಲ್ ಬಿ ಡಬ್ಲ್ಯು ಬದಲು ಕಾಟ್ ಬಿಹೈಂಡ್ ಔಟ್ ತೀರ್ಪು ನೀಡಲಾಯಿತು. ರಿಪ್ಲೇನಲ್ಲಿ ಬಾಲ್ ತಗುಲಿದ್ದು ಸೂಚಿಸುತ್ತಿತ್ತು. ಆದರೆ ಇದು ಪ್ಯಾಡ್ ಗೆ ಬ್ಯಾಟ್ ತಗುಲಿದ ಕಾರಣ ಸ್ನಿಕರ್ ಮೀಟರ್ ಆ ರೀತಿ ತೋರಿಸುತ್ತಿದೆ ಎನ್ನುವುದು ರಾಹುಲ್ ವಾದವಾಗಿತ್ತು. ಆದರೆ ದುರಾದೃಷ್ಟವಶಾತ್ ಉತ್ತಮವಾಗಿ ಆಡುತ್ತಿದ್ದ ರಾಹುಲ್ ಅನಿವಾರ್ಯವಾಗಿ ಪೆವಲಿಯನ್ ಗೆ ಮರಳಬೇಕಾಯಿತು.