Select Your Language

Notifications

webdunia
webdunia
webdunia
webdunia

ಕಾಮನ್ ವೆಲ್ತ್ ಗೇಮ್ಸ್: ಹಾಕಿ, ಕ್ರಿಕೆಟ್ ನಲ್ಲಿ ಭಾರತ ಸೆಮಿಫೈನಲ್ ಗೆ

ಕಾಮನ್ ವೆಲ್ತ್ ಗೇಮ್ಸ್: ಹಾಕಿ, ಕ್ರಿಕೆಟ್ ನಲ್ಲಿ ಭಾರತ ಸೆಮಿಫೈನಲ್ ಗೆ
ಬರ್ಮಿಂಗ್ ಹ್ಯಾಮ್ , ಗುರುವಾರ, 4 ಆಗಸ್ಟ್ 2022 (08:20 IST)
ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ನಿನ್ನೆ ಭಾರತದ ಪಾಲಿಗೆ ಶುಭದಾಯಕವಾಗಿತ್ತು. ವನಿತೆಯರ ಹಾಕಿ, ಮಹಿಳೆಯರ ಕ್ರಿಕೆಟ್ ನಲ್ಲಿ ಭಾರತ ಸೆಮಿಫೈನಲ್ ತಲುಪಿದೆ.

ಕ್ರಿಕೆಟ್ ನಲ್ಲಿ ಬಾರ್ಬಡೋಸ್ ವಿರುದ್ಧ ಆಡಿದ ಹರ್ಮನ್ ಪ್ರೀತ್ ಕೌರ್ ಪಡೆ ನಿನ್ನೆ 100 ರನ್ ಗಳ ಭರ್ಜರಿ ಗೆಲುವು ಸಾಧಿಸಿ ಸೆಮಿಫೈನಲ್ ಗೆ ಲಗ್ಗೆಯಿಟ್ಟಿದೆ. ಆದರೆ ಸೆಮಿಫೈನಲ್ ಈಗ ಪ್ರಬಲ ಇಂಗ್ಲೆಂಡ್ ಅಥವಾ ನ್ಯೂಜಿಲೆಂಡ್ ವಿರುದ್ಧ ಆಡಬೇಕಿದೆ.

ಇನ್ನೊಂದೆಡೆ ವನಿತೆಯರ ಹಾಕಿ ತಂಡವೂ ಅಮೋಘ ಸಾಧನೆ ಮಾಡಿದೆ. ಕೆನಡಾವನ್ನು 3-2 ಗೋಲುಗಳ ಅಂತರದಿಂದ ಸೋಲಿಸಿ ಸೆಮಿಫೈನಲ್ ಗೇರಿದೆ. ಪುರುಷರ ಹಾಕಿ ತಂಡವೂ ಕೆನಡಾ ವಿರುದ್ಧ ಗೆಲುವು ಸಾಧಿಸಿ ಬಿ ಗುಂಪಿನಲ್ಲಿ ಅಗ್ರಸ್ಥಾನಿಯಾಗಿದೆ.

ಇನ್ನು, ಬಾಕ್ಸಿಂಗ್ ನಲ್ಲಿ ಹುಸ್ಸಮುದ್ದೀನ್, ನೀತು ಗಂಘಾಸ್ ಸೆಮಿಫೈನಲ್ ತಲುಪಿ ಕನಿಷ್ಠ ಕಂಚಿನ ಪದಕ ಖಾತ್ರಿಗೊಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೋಡೋದಲ್ಲಿ ಮತ್ತೊಂದು ಪದಕ, ಅಥ್ಲೆಟಿಕ್ಸ್ ನಲ್ಲಿ ಖಾತೆ ತೆರೆದ ತೇಜಸ್ವಿನ್