ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ 2022 ರಲ್ಲಿ ಜೋಡೋದಲ್ಲಿ ಭಾರತ ಮತ್ತೊಂದು ಪದಕ ಗೆದ್ದಿದೆ. ಅಥ್ಲೆಟಿಕ್ಸ್ ನಲ್ಲಿ ಮೊದಲ ಪದಕ ಗೆದ್ದು ಖಾತೆ ತೆರೆದಿದೆ.
ಮಹಿಳೆಯರ 78 ಕೆ.ಜಿ. ವಿಭಾಗದಲ್ಲಿ ಭಾರತದ ತುಲಿಕಾ ಮಾನ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಫೈನಲ್ ಹಣಾಹಣಿಯಲ್ಲಿ ಸ್ಕಾಟ್ ಲ್ಯಾಂಡ್ ಎದುರಾಳಿಯನ್ನು ಸೋಲಿಸಿ ತುಲಿಕಾ ಪದಕ ಗೆದ್ದಿದ್ದಾರೆ.
ಪುರುಷರ ಹೈಜಂಪ್ ವಿಭಾಗದಲ್ಲಿ 23 ವರ್ಷದ ತೇಜಸ್ವಿನ್ ಶಂಕರ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಒಟ್ಟು 2.22 ಮೀ.ಎತ್ತರ ಜಿಗಿದ ತೇಜಸ್ವಿನ್ ಮೂರನೇ ಸ್ಥಾನ ಪಡೆದರು.