Publish Date: Wed, 03 Aug 2022 (16:13 IST)
Updated Date: Wed, 03 Aug 2022 (16:14 IST)
ಬರ್ಮಿಂಗ್ ಹ್ಯಾಮ್: ವೈಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತ ಮತ್ತೊಂದು ಪದಕ ಗೆದ್ದುಕೊಂಡಿದೆ. ಇದೀಗ ತಾನೇ ನಡೆದ ಪುರುಷರ 109 ಕೆ.ಜಿ ಫೈನಲ್ ನಲ್ಲಿ ಭಾರತದ ಲವ್ ಪ್ರೀತ್ ಸಿಂಗ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
192 ಕೆ.ಜಿ. ಫೈನಲ್ ಲಿಫ್ಟ್ ಮಾಡಿದ ಲವ್ ಪ್ರೀತ್ ಸಿಂಗ್ ರಾಷ್ಟ್ರೀಯ ದಾಖಲೆ ಮಾಡಿದರು. ಎರಡನೇ ಪ್ರಯತ್ನದಲ್ಲಿ 189 ಕೆ.ಜಿ. ಭಾರ ಎತ್ತುವಾಗ ಕೊಂಚ ತಡಬಡಾಯಿಸಿದರೂ ಸುಧಾರಿಸಿಕೊಂಡು ಪ್ರಯತ್ನ ಪೂರ್ತಿ ಮಾಡಿದರು. ಮೊದಲ ಪ್ರಯತ್ನದಲ್ಲಿ ಅವರು 185 ಕೆ.ಜಿ. ಭಾರ ಎತ್ತಿದ್ದರು.