Publish Date: Mon, 26 Jul 2021 (09:42 IST)
Updated Date: Mon, 26 Jul 2021 (09:45 IST)
ಟೋಕಿಯೋ: ಭಾರತದ ಪುರುಷರ ಆರ್ಚರಿ ತಂಡ ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟಿದ್ದು, ಕೊರಿಯಾ ತಂಡದ ವಿರುದ್ಧ ಕೆಲವೇ ನಿಮಿಷಗಳಲ್ಲಿ ಸೆಣಸಾಡಲಿದೆ.
ಇಂದು ಬೆಳಗ್ಗೆ ಕಝಕಿಸ್ತಾನ ತಂಡದ ವಿರುದ್ಧ ಪಂದ್ಯದಲ್ಲಿ ಭಾರತೀಯರು 6-2 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟಿದ್ದಾರೆ. ಭಾರತ ತಂಡದಲ್ಲಿ ಅತನು ದಾಸ್, ಪ್ರವೀಣ್ ಜಾಧವ್ ಮತ್ತು ತರುಣ್ ದೀಪ್ ರೈ ಆಡುತ್ತಿದ್ದಾರೆ.
ಶ್ರೇಯಾಂಕ ಸುತ್ತಿನಲ್ಲಿ ಭಾರತೀಯರ ಪ್ರದರ್ಶನ ತಕ್ಕಮಟ್ಟಿಗಿತ್ತಷ್ಟೇ. ಆದರೆ ಇಂದಿನ ಪಂದ್ಯದಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ. ಇದೇ ಪ್ರದರ್ಶನ ಮುಂದೆ ನಡೆಯಲಿರುವ ಪಂದ್ಯದಲ್ಲಿ ತೋರಿದರೆ ಪದಕ ಗ್ಯಾರಂಟಿಯಾಗಲಿದೆ. ಆದರೆ ಕ್ವಾರ್ಟರ್ ಫೈನಲ್ ನ ಎದುರಾಳಿ ಕಝಕಿಸ್ತಾನದಂತೆ ದುರ್ಬಲರಲ್ಲ ಎನ್ನುವುದು ಗಮನಾರ್ಹ.