Publish Date: Sun, 08 Aug 2021 (11:42 IST)
Updated Date: Sun, 08 Aug 2021 (08:59 IST)
ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಭಾರತ ಗಾಲ್ಫ್ ಕ್ರೀಡೆಯಲ್ಲಿ ಇದುವರೆಗೆ ಹೇಳ ಹೆಸರಿಲ್ಲದಂತಿತ್ತು. ಆದರೆ ಈ ಬಾರಿ ಅದಿತಿ ಅಶೋಕ್ ಎಂಬ ಬೆಂಗಳೂರಿನ ಹೆಣ್ಣು ಮಗಳು ತೋರಿದ ಸಾಧನೆ ದೇಶವೇ ತಿರುಗಿ ನೋಡುವಂತೆ ಮಾಡಿದೆ.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅದಿತಿ ನಾಲ್ಕನೇ ಸ್ಥಾನ ಪಡೆದು ಕೂದಲೆಳೆಯಲ್ಲಿ ಕಂಚಿನ ಪದಕ ತಪ್ಪಿಸಿಕೊಂಡರು. ಆದರೇನಂತೆ? ಅದಿತಿಯ ಸಾಧನೆಯನ್ನು ರಾಷ್ಟ್ರಪತಿ ರಮಾನಾಥ್ ಕೋವಿಂದ್ ರಿಂದ ಹಿಡಿದು ಸೆಲೆಬ್ರಿಟಿಗಳು, ಫ್ಯಾನ್ಸ್ ಕೊಂಡಾಡಿದ್ದಾರೆ.
ಗಾಲ್ಫ್ ಕ್ರೀಡೆಯಲ್ಲಿ ಭಾರತದ ಕೀರ್ತಿ ಪತಾಕೆ ಎತ್ತಿ ಹಿಡಿದ ಬೆಂಗಳೂರ ಹುಡುಗಿಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಪದಕ ಗೆಲ್ಲದೇ ಹೋದರೂ ದೇಶದ ಹೃದಯ ಗೆಲ್ಲುವಲ್ಲಿ ಅದಿತಿ ಯಶಸ್ವಿಯಾಗಿದ್ದಾರೆ.