Select Your Language

Notifications

webdunia
webdunia
webdunia
Saturday, 12 April 2025
webdunia

ಕೊನೆಗೂ ಈಡೇರಿತು ಮೀರಾಬಾಯಿ ಆಸೆ: ಕ್ರೀಡಾ ಸಚಿವರೂ ಸಾಥ್!

Finally Mirabai Chanu desire fullfilled
ನವದೆಹಲಿ , ಬುಧವಾರ, 28 ಜುಲೈ 2021 (09:30 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತೀಯ ವೈಟ್ ಲಿಫ್ಟರ್ ಮೀರಾಬಾಯಿ ಚಾನು ಭಾರತಕ್ಕೆ ಬಂದ ತಕ್ಷಣ ತಮ್ಮ ಆಸೆ ಪೂರೈಸಿಕೊಂಡಿದ್ದಾರೆ. ಇದಕ್ಕೆ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್, ಮಾಜಿ ಕ್ರೀಡಾ ಸಚಿವ ಕಿರಣ್ ರಿಜಿಜು ಕೂಡಾ ಸಾಥ್ ನೀಡಿದ್ದಾರೆ!

Photo Courtesy: Twitter

ಮೀರಾಬಾಯಿ ಪದಕ ಗೆದ್ದ ಬೆನ್ನಲ್ಲೇ ನನಗೆ ತಕ್ಷಣಕ್ಕೆ ಮನದಣಿಯ ಪಿಜ್ಜಾ ತಿನ್ನಬೇಕೆನಿಸುತ್ತದೆ ಎಂದಿದ್ದರು. ಅದರಂತೆ ಡೊಮಿನೊಸ್ ಜೀವನ ಪೂರ್ತಿ ಉಚಿತ ಪಿಜ್ಜಾ ನೀಡುವುದಾಗಿ ಘೋಷಿಸಿತ್ತು.

ಇದೀಗ ತವರಿಗೆ ಮರಳಿರುವ ಮೀರಾಬಾಯಿ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್, ಮಾಜಿ ಕ್ರೀಡಾ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿಯಾಗಿದ್ದು, ಇಬ್ಬರ ಜೊತೆಗೆ ಪಿಜ್ಜಾ ಸವಿದಿದ್ದಾರೆ. ಈ ಫೋಟೋಗಳನ್ನು ಮೀರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೋಕಿಯೋ ಒಲಿಂಪಿಕ್ಸ್ ಕಣದಲ್ಲಿ ಇಂದು ಭಾರತೀಯರ ಪಂದ್ಯಗಳು