ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ವೈಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಭಾರತಕ್ಕೆ ನಿನ್ನೆ ಮರಳಿರುವ ಮೀರಾಬಾಯಿ ಚಾನುಗೆ ಈಗ ಭರ್ಜರಿ ಕೊಡುಗೆಗಳು ಬಹುಮಾನದ ರೂಪದಲ್ಲಿ ಸಿಗುತ್ತಿದೆ.
ಸಾಧನೆ ಮಾಡಿ ಬಂದಿರುವ ತಮ್ಮ ರಾಜ್ಯದ ಹೆಮ್ಮೆಯ ಆಟಗಾರ್ತಿಗೆ ಮಣಿಪುರ ಸರ್ಕಾರ ಪೊಲೀಸ್ ಅಧೀಕ್ಷಕಿ ಹುದ್ದೆ ನೀಡಿದೆ. ಜೊತೆಗೆ 1 ಕೋಟಿ ರೂ. ಬಹುಮಾನವನ್ನೂ ನೀಡಿದೆ.
ಇದಲ್ಲದೆ ಮಣಿಪುರದಲ್ಲಿ ವಿಶ್ವದರ್ಜೆಯ ವೈಟ್ ಲಿಫ್ಟಿಂಗ್ ಅಕಾಡೆಮಿಯನ್ನು ತೆರೆಯಲಾಗುವುದು ಎಂದು ಸಿಎಂ ಎನ್. ಬಿರೆನ್ ಸಿಂಗ್ ಹೇಳಿದ್ದಾರೆ.