Publish Date: Tue, 27 Jul 2021 (10:00 IST)
Updated Date: Tue, 27 Jul 2021 (10:07 IST)
ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಟೇಬಲ್ ಟೆನಿಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯವಾಗಿದೆ. ಪುರುಷರ ಸಿಂಗಲ್ಸ್ ನಲ್ಲಿ ಹಿರಿಯ ತಾರೆ ಶರತ್ ಕಮಲ್ ಮೂರನೇ ಸುತ್ತಿನ ಪಂದ್ಯದಲ್ಲಿ ಸೋಲನುಭವಿಸಿದ್ದಾರೆ.
ಇದರೊಂದಿಗೆ ಟೇಬಲ್ ಟೆನಿಸ್ ವಿಭಾಗದಲ್ಲಿ ಭಾರತ ಸ್ಪರ್ಧೆ ಮುಗಿಸಿದೆ. ಇಂದು ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಶರತ್ ಕಮಲ್ ಚೀನಾದ ಮಾ ಲಾಂಗ್ ವಿರುದ್ಧ 1-4 ಅಂತರದಿಂದ ಸೋಲನುಭವಿಸಿದ್ದಾರೆ.
ಈಗಾಗಲೇ ಮಿಕ್ಸೆಡ್ ಡಬಲ್ಸ್ ನಲ್ಲಿ ಶರತ್-ಮಣಿಕ್ ಬಾತ್ರಾ ಜೋಡಿ ಸೋತಿತ್ತು. ನಿನ್ನೆ ನಡೆದ ಮಹಿಳೆಯರ ಸಿಂಗಲ್ಸ್ ನ ಮೂರನೇ ಸುತ್ತಿನ ಪಂದ್ಯದಲ್ಲಿ ಮಣಿಕ್ ಬಾತ್ರಾ ಸೋಲನುಭವಿಸಿದ್ದರು. ಇದರೊಂದಿಗೆ ಟೇಬಲ್ ಟೆನಿಸ್ ನಲ್ಲಿ ಭಾರತದ ಭರವಸೆ ಕಮರಿದೆ.