Publish Date: Wed, 28 Jul 2021 (08:42 IST)
Updated Date: Wed, 28 Jul 2021 (08:45 IST)
ಟೋಕಿಯೋ: ಒಲಿಂಪಿಕ್ಸ್ ನ ಬ್ಯಾಡ್ಮಿಟಂನ್ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಭರವಸೆಯ ತಾರೆ ಪಿ.ವಿ. ಸಿಂಧು ಇಂದು ಎರಡನೇ ಸುತ್ತಿನ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದಾರೆ.
ಇಂದು ನಡೆದ ಪಂದ್ಯದಲ್ಲಿ ಹಾಂಗ್ ಕಾಂಗ್ ನ ಚೆಂಗ್ ನಾನ್ ಯಿ ವಿರುದ್ಧ 21-9, 21-16 ಅಂತರದಿಂದ ಗೆಲುವು ಸಾಧಿಸಿದರು. ಇದರೊಂದಿಗೆ ಸಿಂಧು ಮೂರನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
ಮೊದಲ ಸೆಟ್ ನಲ್ಲಿ ಎದುರಾಳಿಯನ್ನು ಸುಲಭವಾಗಿ ಮಣಿಸಿದ ಸಿಂಧುವಿಗೆ ಎರಡನೇ ಸುತ್ತಿನಲ್ಲಿ ಪ್ರತಿರೋಧ ಸಿಕ್ಕಿತು. ಆರಂಭದಲ್ಲಿ ಕೆಲವು ಅಂಕಗಳನ್ನು ಕಳೆದುಕೊಂಡರೂ ಅಂತಿಮ ಹಂತದಲ್ಲಿ ತಮ್ಮ ಅನುಭವ ಪ್ರದರ್ಶಿಸಿದ ಸಿಂಧು ಆಕ್ರಮಣಕಾರಿ ಆಟದ ಮೂಲಕ ಎದುರಾಳಿಯನ್ನು ಮಣಿಸಿದರು.