Publish Date: Tue, 27 Jul 2021 (20:24 IST)
Updated Date: Tue, 27 Jul 2021 (22:17 IST)
ಸ್ಪಿನ್ ಆಲ್ ರೌಂಡರ್ ಕೃನಾಲ್ ಪಾಂಡ್ಯಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮಂಗಳವಾರ ನಡೆಯಬೇಕಿದ್ದ ಭಾರತ ಮತ್ತು ಶ್ರೀಲಂಕಾ ನಡುವಣ 2ನೇ ಟಿ-20 ಪಂದ್ಯ ಮುಂದೂಡಲಾಗಿದೆ.
ಕೃನಾಲ್ ಪಾಂಡ್ಯಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಬೆನ್ನಲ್ಲೇ ಕೃನಾಲ್ ಸೇರಿದಂತೆ ಎರಡೂ ತಂಡಗಳ ಎಲ್ಲಾ ಆಟಗಾರರನ್ನು ಐಸೋಲೇಷನ್ ನಲ್ಲಿ ಇರಿಸಲಾಗಿದ್ದು, ಕೃನಾಲ್ ಜೊತೆ ನಿಕಟದ ಸಂಪರ್ಕ ಹೊಂದಿದ್ದ ಆಟಗಾರರ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ. ಇದೇ ವೇಳೆ ಶ್ರೀಲಂಕಾ ತಂಡದ ವೀಡಿಯೋ ವಿಶ್ಲೇಷಕನಿಗೂ ಕೂಡ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಭಾರತ ತಂಡ ಈಗಾಗಲೇ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದ್ದು, ಈ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ಗುರಿ ಹೊಂದಿತ್ತು. ಆದರೆ ಈ ಬೆಳವಣಿಗೆ ಎರಡೂ ತಂಡಗಳ ಹಿನ್ನಡೆಗೆ ಕಾರಣವಾಗಿದೆ.