Select Your Language

Notifications

webdunia
webdunia
webdunia
webdunia

ಶ್ರೀಲಂಕಾ ವಿರುದ್ಧ ದಾಖಲೆ ಮಾಡಲಿರುವ ಯಜುವೇಂದ್ರ ಚಾಹಲ್

ಯಜುವೇಂದ್ರ ಚಾಹಲ್
ಕೊಲೊಂಬೋ: ಶ್ರೀಲಂಕಾ ವಿರುದ್ಧ ಇಂದು ನಡೆಯಲಿರುವ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಹೊಸ ದಾಖಲೆ ಮಾಡಲಿದ್ದಾರೆ.


ಚಾಹಲ್ ಇಂದು ಒಂದು ವಿಕೆಟ್ ಕಿತ್ತರೆ ಶ್ರೀಲಂಕಾ ವಿರುದ್ಧ ಟಿ20 ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಸಂಪಾದಿಸಿದ ಬೌಲರ್ ಎಂಬ ದಾಖಲೆ ಮಾಡಲಿದ್ದಾರೆ.

ಕಳೆದ ಎರಡು ಪಂದ್ಯಗಳಿಂದ ಚಾಹಲ್ ಉತ್ತಮ ಫಾರ್ಮ್ ಪ್ರದರ್ಶಿಸಿದ್ದಾರೆ. ಹೀಗಾಗಿ ಅವರು ಇಂದು ಈ ದಾಖಲೆ ಮಾಡುವುದು ಬಹುತೇಕ ನಿಚ್ಚಳವಾಗಿದೆ. ಚಾಹಲ್ ಈಗ 7 ಇನಿಂಗ್ಸ್ ಗಳಿಂದ 15 ವಿಕೆಟ್ ಕಬಳಿಸಿದ್ದು, ಇಂಗ್ಲೆಂಡ್ ನ ಕ್ರಿಸ್ ಜೋರ್ಡಾನ್ ಜೊತೆ ದಾಖಲೆ ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೇಬಲ್ ಟೆನಿಸ್ ನಲ್ಲಿ ಶರತ್ ಕಮಲ್ ಸವಾಲು ಅಂತ್ಯ