Publish Date: Sun, 25 Jul 2021 (11:04 IST)
Updated Date: Sun, 25 Jul 2021 (09:27 IST)
ಕೊಲೊಂಬೋ: ಶ್ರೀಲಂಕಾ ವಿರುದ್ಧ ಇಂದಿನಿಂದ ಆರಂಭವಾಗುವ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಪರ ಕನ್ನಡಿಗ ದೇವದತ್ತ್ ಪಡಿಕ್ಕಲ್ ಓಪನರ್ ಆಗುವ ಸಾಧ‍್ಯತೆಯಿದೆ.
ಈ ಮೂಲಕ ಮೊದಲ ಬಾರಿಗೆ ದೇವದತ್ತ್ ಪಡಿಕ್ಕಲ್ ಟೀಂ ಇಂಡಿಯಾ ಜರ್ಸಿ ತೊಟ್ಟು ಆಡಲಿದ್ದಾರೆ. ಪೃಥ್ವಿ ಶಾ ಏಕದಿನ ಪಂದ್ಯದಲ್ಲಿ ಓಪನರ್ ಆಗಿ ಕಣಕ್ಕಿಳಿದಿದ್ದರು. ಅಂತಿಮ ಪಂದ್ಯದಲ್ಲಿ ಐವರು ಹೊಸ ಆಟಗಾರರಿಗೆ ಅವಕಾಶ ನೀಡಲಾಗಿತ್ತಾದರೂ, ದೇವದತ್ತ್ ಪಡಿಕ್ಕಲ್ ಗೆ ಅವಕಾಶ ಸಿಕ್ಕಿರಲಿಲ್ಲ.
ಇದರ ಬಗ್ಗೆ ಅಭಿಮಾನಿಗಳೂ ಬೇಸರ ವ್ಯಕ್ತಪಡಿಸಿದ್ದರು. ಐಪಿಎಲ್ ನಲ್ಲಿ ಆರ್ ಸಿಬಿ ಪರ ಸ್ಪೋಟಕ ಆರಂಭ ನೀಡುವ ದೇವದತ್ತ್ ಪಡಿಕ್ಕಲ್ ಈ ಫಾರ್ಮ್ಯಾಟ್ ಗೆ ಹೇಳಿ ಮಾಡಿಸಿದವರು. ಈ ಕಾರಣಕ್ಕೇ ಅವರಿಗೆ ಟಿ20 ಯಲ್ಲಿ ಶಿಖರ್ ಧವನ್ ಜೊತೆ ಆರಂಭಿಕರಾಗಿ ಕಣಕ್ಕಿಳಿಯಲು ಅವಕಾಶ ಸಿಗುವ ಸಾಧ‍್ಯತೆಯಿದೆ.