Select Your Language

Notifications

webdunia
webdunia
webdunia
webdunia

ಟೋಕಿಯೋ ಒಲಿಂಪಿಕ್ಸ್ ವಿಲೇಜ್ ನಲ್ಲಿ ಓರ್ವನಿಗೆ ಕೊರೋನಾ ದೃಢ

ಟೋಕಿಯೋ ಒಲಿಂಪಿಕ್ಸ್ ವಿಲೇಜ್ ನಲ್ಲಿ ಓರ್ವನಿಗೆ ಕೊರೋನಾ ದೃಢ
ಟೋಕಿಯೋ , ಶನಿವಾರ, 17 ಜುಲೈ 2021 (10:52 IST)
ಟೋಕಿಯೋ: ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕೆಲವೇ ದಿನ ಬಾಕಿಯಿರುವ ಬೆನ್ನಲ್ಲೇ ಒಲಿಂಪಿಕ್ಸ್ ಗ್ರಾಮದಲ್ಲಿ ಓರ್ವನಿಗೆ ಕೊರೋನಾ ಸೋಂಕು ದೃಢಪಟ್ಟಿದೆ.


ಈ ವಿಚಾರವನ್ನು ಖುದ್ದು ಸಂಘಟಕರೇ ಖಚಿತಪಡಿಸಿದ್ದಾರೆ. ಇದು ಕೂಟ ಆರಂಭಕ್ಕೂ ಮೊದಲು ಒಲಿಂಪಿಕ್ ಗ್ರಾಮದಲ್ಲಿ ಆತಂಕ ಸೃಷ್ಟಿಮಾಡಿದೆ.

2020 ರಲ್ಲೇ ನಡೆಯಬೇಕಿದ್ದ ಒಲಿಂಪಿಕ್ಸ್ ಕ್ರೀಡಾ ಕೂಟ ಕೊರೋನಾ ಕಾರಣದಿಂದ ಮುಂದೂಡಿಕೆಯಾಗಿ ಈ ವರ್ಷ ನಡೆಯುತ್ತಿದೆ. ಅದೂ ಕೊರೋನಾ ಕಾರಣದಿಂದ ಹಲವು ನಿಯಮಾವಳಿಗಳಲ್ಲಿ ಬದಲಾವಣೆ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕೂಟ ಆಯೋಜಿಸಲಾಗುತ್ತಿದೆ. ಇದರ ನಡುವೆಯೂ ಓರ್ವ ಸಿಬ್ಬಂದಿಯಲ್ಲಿ ಸಣ್ಣ ಪ್ರಮಾಣದ ಲಕ್ಷಣಗಳೊಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ಯಾಕ್ ಟು ಗ್ರೌಂಡ್: ಕೊಹ್ಲಿ ಪಡೆಯ ಅಭ್ಯಾಸ ಶುರು