ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುತ್ತಿರುವ ಕ್ರೀಡಾಳುಗಳಿಗೆ ಸ್ಪೂರ್ತಿ ನೀಡಲು ಹೆಚ್ಚಿನ ರಾಜ್ಯ ಸರ್ಕಾರಗಳು ಪದಕ ಗೆದ್ದರೆ ಬಹುಮಾನ ಮೊತ್ತ ಘೋಷಣೆ ಮಾಡಿದೆ. ಯಾವ ರಾಜ್ಯ ಎಷ್ಟು ಬಹುಮಾನ ಮೊತ್ತ ಘೋಷಿಸಿದೆ ನೋಡೋಣ.
ಕರ್ನಾಟಕದಿಂದ ಚಿನ್ನ ಗೆದ್ದರೆ 5 ಕೋಟಿ ರೂ. ಬೆಳ್ಳಿ ಗೆದ್ದರೆ 3 ಕೋಟಿ ರೂ., ಕಂಚಿನ ಪದಕಕ್ಕೆ 2 ಕೋಟಿ ರೂ. ಘೋಷಣೆಯಾಗಿದೆ. ಗುಜರಾತ್ ಸರ್ಕಾರವೂ ಇದೇ ಮಾದರಿಯಲ್ಲಿ ಬಹುಮಾನ ಮೊತ್ತ ಘೋಷಿಸಿದೆ.
ಉತ್ತರ ಪ್ರದೇಶ, ಹರ್ಯಾಣ, ಒಡಿಶಾ, ಚಂಢೀಘಡ ರಾಜ್ಯಗಳು ಚಿನ್ನದ ಪದಕಕ್ಕೆ 6 ಕೋಟಿ ರೂ. ಘೋಷಣೆ ಮಾಡಿದೆ. ದೆಹಲಿ, ರಾಜಸ್ಥಾನ, ತಮಿಳುನಾಡು, ಸಿಕ್ಕಿಂ ರಾಜ್ಯಗಳು 3 ಕೋಟಿ ರೂ. ಬಹುಮಾನ ಘೋಷಿಸಿದೆ. ಪಂಜಾಬ್ 2.25 ಕೋಟಿ ರೂ., ಹಿಮಾಚಲಪ್ರದೇಶ, ಜಾರ್ಖಂಡ್, ತೆಲಂಗಾಣ 2 ಕೋಟಿ ರೂ. ನೀಡಲಿದೆ. ಮಣಿಪುರ, ಮಹಾರಾಷ್ಟ್ರ, ಕೇರಳ, ಗೋವಾ ರಾಜ್ಯಗಳು 1 ಕೋಟಿ ರೂ. ನೀಡಲಿವೆ. ಮೇಘಾಲಯ 75 ಲಕ್ಷ ರೂ., ಜಮ್ಮು-ಕಾಶ್ಮೀರ 50 ಲಕ್ಷ ರೂ., ಪ.ಬಂಗಾಲ 25 ಲಕ್ಷ ರೂ. ಚಿನ್ನ ಗೆದ್ದ ಪದಕ ವಿಜೇತರಿಗೆ ಬಹುಮಾನ ನೀಡಲಿದೆ.