Publish Date: Fri, 16 Jul 2021 (11:05 IST)
Updated Date: Fri, 16 Jul 2021 (09:57 IST)
ಟೋಕಿಯೋ: ಕೊರೋನಾ ಮಹಾಮಾರಿ ಎಲ್ಲೆಂದರಲ್ಲಿ ವಕ್ಕರಿಸಿಕೊಳ್ಳುತ್ತಿದೆ. ಇದೀಗ ಮಹಾನ್ ಕ್ರೀಡಾಕೂಟ ಒಲಿಂಪಿಕ್ಸ್ ಗೂ ಕೊರೋನಾ ಕಾಲಿಟ್ಟಿದೆ.
ಒಲಿಂಪಿಕ್ಸ್ ನಲ್ಲಿ ಭಾಗಿಯಾಗಲು ಬಂದಿದ್ದ ಓರ್ವ ಅಥ್ಲೆಟ್ ಮತ್ತು ಐವರು ಸಿಬ್ಬಂದಿಗಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದು ಕೂಟದ ಮೇಲೆ ಕರಿನೆರಳು ಬೀರಿದೆ.
ಈಗಾಗಲೇ ಸುರಕ್ಷತಾ ದೃಷ್ಟಿಯಿಂದ ಒಲಿಂಪಿಕ್ಸ್ ನಲ್ಲಿ ಹಲವು ನಿಯಮ ಬದಲಾವಣೆಯಾಗಿದೆ. ಜೊತೆಗೆ ಪ್ರೇಕ್ಷಕರಿಗೂ ಅವಕಾಶ ನೀಡಲಾಗಿಲ್ಲ.ಹಾಗಿದ್ದರೂ ವಿಶ್ವದ ಬಹುತೇಕ ರಾಷ್ಟ್ರಗಳು ಪಾಲ್ಗೊಳ್ಳುವ ಈ ಕ್ರೀಡಾ ಕೂಟದಲ್ಲಿ ಕೊರೋನಾ ಕೂಡಾ ಅತಿಥಿಯಾಗಿ ಪಾಲ್ಗೊಂಡಿರುವುದು ದೊಡ್ಡ ತಲೆನೋವು ಉಂಟು ಮಾಡಿದೆ.