ದುಬೈ: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ದುಬೈನ ಗೋಲ್ಡನ್ ವೀಸಾ ಸೌಲಭ್ಯ ಸಿಕ್ಕಿದೆ. ಇದರ ಅನ್ವಯ ಸಾನಿಯಾ ಈಗ ದುಬೈನಲ್ಲಿ 10 ವರ್ಷ ವಾಸ್ತವ್ಯ ಹೂಡಬಹುದಾಗಿದೆ.
ಸಾನಿಯಾ ಹಾಗೂ ಪಾಕ್ ಮೂಲದ ಕ್ರಿಕೆಟಿಗ ಪತಿ ಶೊಯೇಬ್ ಮಲಿಕ್ ದುಬೈನಲ್ಲಿ ತಮ್ಮದೇ ಬಂಗಲೆ ಹೊಂದಿದ್ದಾರೆ. ಇದೀಗ ಸಾನಿಯಾಗೆ ಅಲ್ಲಿಯೇ ವಾಸ್ತವ್ಯ ಹೂಡುವ ಗೌರವ ದೊರೆತಿದ್ದು ವಿಶೇಷವಾಗಿದೆ.
ಮುಂದಿನ ದಿನಗಳಲ್ಲಿ ಇಲ್ಲಿ ತಮ್ಮದೇ ಟೆನಿಸ್ ಮತ್ತು ಕ್ರಿಕೆಟ್ ಅಕಾಡಮಿ ತೆರೆಯುವ ಉದ್ದೇಶವೂ ಸಾನಿಯಾ ದಂಪತಿಗಿದೆ ಎನ್ನಲಾಗಿದೆ. ಅಲ್ಲದೆ, ಪುತ್ರ ಇಝಾನ್ ರನ್ನೂ ಇಲ್ಲಿಯೇ ಬೆಳೆಸುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ. ಗೋಲ್ಡನ್ ವೀಸಾ ಪಡೆದ ಕೆಲವೇ ಕೆಲವು ಭಾರತೀಯ ಗಣ್ಯರ ಸಾಲಿಗೆ ಸಾನಿಯಾ ಸೇರಿಕೊಂಡಿದ್ದಾರೆ.