Publish Date: Fri, 16 Jul 2021 (10:30 IST)
Updated Date: Fri, 16 Jul 2021 (09:55 IST)
ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾದಲ್ಲಿ ಈಗ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇದಕ್ಕೆ ಬಯೋ ಬಬಲ್ ವಾತಾವರಣದಿಂದ ಹೊರಬಂದಿದ್ದೇ ಕಾರಣವಾಯಿತು ಎನ್ನಲಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಬಳಿಕ ಸಿಕ್ಕ ಸುದೀರ್ಘ ಅವಧಿಯ ಬ್ರೇಕ್ ನಲ್ಲಿ ಕ್ರಿಕೆಟಿಗರು ಫುಟ್ ಬಾಲ್ ಪಂದ್ಯ ವೀಕ್ಷಣೆ, ಪ್ರವಾಸೀ ತಾಣಗಳಿಗೆ ಪ್ರವಾಸವೆಂದು ಸಾಕಷ್ಟು ಸುತ್ತಾಟ ನಡೆಸಿದ್ದಾರೆ. ಇದುವೇ ಕ್ರಿಕೆಟಿಗರಿಗೆ ಈಗ ಮುಳುವಾಗಿದೆ.
ಇದರ ಪರಿಣಾಮವೇ ಕ್ರಿಕೆಟಿಗರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇದೀಗ ಕೊರೋನಾ ಪರೀಕ್ಷೆ ಮುಗಿಸಿ ನೆಗೆಟಿವ್ ವರದಿ ಬಂದ ಕ್ರಿಕೆಟಿಗರೆಲ್ಲಾ ಮತ್ತೆ ಬಯೋ ಬಬಲ್ ವಾತಾವರಣ ಸೇರಿಕೊಂಡಿದ್ದಾರೆ.