Publish Date: Sat, 17 Jul 2021 (10:40 IST)
Updated Date: Sat, 17 Jul 2021 (10:42 IST)
ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರು ಸುದೀರ್ಘ ವಿರಾಮದ ಬಳಿಕ ಈಗ ಮೈದಾನಕ್ಕೆ ಮರಳಿದ್ದಾರೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್ ಸೇರಿದಂತೆ ಪ್ರಮುಖ ಕ್ರಿಕೆಟಿಗರು ನಿನ್ನೆಯಿಂದ ಅಭ್ಯಾಸ ಶುರು ಮಾಡಿದ್ದಾರೆ. ಕೊರೋನಾ ಸೋಂಕಿಗೊಳಗಾದ ರಿಷಬ್ ಪಂತ್, ಸಹಾಯ ಸಿಬ್ಬಂದಿ ಬಿಟ್ಟು ಉಳಿದವರು ಮೈದಾನಕ್ಕಿಳಿದಿದ್ದಾರೆ.
ಆಗಸ್ಟ್ 4 ರಿಂದ ಮೊದಲ ಟೆಸ್ಟ್ ಆರಂಭವಾಗಲಿದ್ದು, ಒಟ್ಟು ಐದು ಪಂದ್ಯಗಳ ಸರಣಿ ಇದಾಗಿದೆ. ನಾಯಕ ಕೊಹ್ಲಿ, ಕೋಚ್ ರವಿಶಾಸ್ತ್ರಿ ಪಾಲಿಗೆ ಇದು ಮಹತ್ವದ ಸರಣಿಯಾಗಿದೆ.