Publish Date: Sat, 31 Jul 2021 (09:01 IST)
Updated Date: Sat, 31 Jul 2021 (09:21 IST)
ಟೋಕಿಯೋ: ದೀಪಿಕಾ ಕುಮಾರಿ ಬಳಿಕ ಆರ್ಚರಿಯಲ್ಲಿ ಪತಿ ಅತನು ದಾಸ್ ಕೂಡಾ ನಿರಾಸೆ ಮೂಡಿಸಿದ್ದಾರೆ. ಪ್ರಿ ಕ್ವಾರ್ಟರ್ ಫೈನಲ್ ಹಂತಕ್ಕೇರಿದ್ದ ಅತನು ಜಪಾನ್ ನ ತಕ್ಹರು ಫುರುಖಾವ ವಿರುದ್ಧ 4-6 ಅಂತರದಿಂದ ಸೋಲು ಅನುಭವಿಸಿದ್ದಾರೆ.
ನಿನ್ನೆ ಅತನು ಪತ್ನಿ, ದೀಪಿಕಾ ಕುಮಾರಿ ಕ್ವಾರ್ಟರ್ ಫೈನಲ್ ಹಂತದಲ್ಲಿ ಸೋಲು ಅನುಭವಿಸಿದ್ದರು. ಇಂದು ಅತನು ಕೂಡಾ ಕೂಟದಿಂದ ಹೊರಬಿದ್ದಿದ್ದಾರೆ.
ಇನ್ನೊಂದೆಡೆ ಬಾಕ್ಸಿಂಗ್ ನಲ್ಲಿ ಭರವಸೆ ಮೂಡಿಸಿದ್ದ ಅಮಿತ್ ಕೊಲಂಬಿಯಾ ಮಾರ್ಟಿನೆಝ್ ವಿರುದ್ಧ ಪ್ರಿ ಕ್ವಾರ್ಟರ್ ಫೈನಲ್ ಹಂತದಲ್ಲಿ ಸೋತು ಕೂಟದಿಂದ ಹೊರಬಿದ್ದಿದ್ದಾರೆ.