Select Your Language

Notifications

webdunia
webdunia
webdunia
webdunia

ಮಹಿಳಾ ಕ್ರಿಕೆಟ್ ತಂಡಕ್ಕೆ ಸಚಿನ್ ತೆಂಡುಲ್ಕರ್ ಹೇಳಿದ ಕಿವಿಮಾತೇನು ಗೊತ್ತಾ...?

ಮಹಿಳಾ ಕ್ರಿಕೆಟ್ ತಂಡಕ್ಕೆ ಸಚಿನ್ ತೆಂಡುಲ್ಕರ್ ಹೇಳಿದ ಕಿವಿಮಾತೇನು ಗೊತ್ತಾ...?
ಮುಂಬೈ , ಬುಧವಾರ, 24 ಜನವರಿ 2018 (19:01 IST)
ಮುಂಬೈ : ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದ ಪ್ರವಾಸದಲ್ಲಿದ್ದು, ದಕ್ಷಿಣ ಆಫ್ರಿಕಾ ವಿರುದ್ದದ 2 ಟೆಸ್ಟ್  ಪಂದ್ಯಗಳಲ್ಲಿ ಸೋಲನುಭವಿಸಿತ್ತು, ಈಗ ಟೀಂ ಇಂಡಿಯಾ ಮೂರನೇ ಪಂದ್ಯವಾಡುತ್ತಿದ್ದು, ಈ ಸಂದರ್ಭದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾದಲ್ಲಿ 3 ಏಕದಿನ ಹಾಗು 5 ಟಿ20 ಪಂದ್ಯಗಳನಾಡಲು ಪ್ರವಾಸ ಕೈಗೊಂಡಿದೆ.

 
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮರಳುವ ಮೊದಲು ಟೀಂ ಇಂಡಿಯಾದ ಮಾಜಿ ನಾಯಕ ಸಚಿನ್ ತೆಂಡುಲ್ಕರ್ ಅವರನ್ನು ಭೇಟಿ ಮಾಡಿ ಸಲಹೆ ಸೂಚನೆಗಳನ್ನು ಪಡೆದಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ತಂಡದ ನಾಯಕಿ ಮಿಥಾಲಿ ರಾಜ್  ಅವರು ‘ಸಚಿನ್ ಅವರಂತಹ ಹಿರಿಯ ಅನುಭವಿ ಆಟಗಾರರು ನೀಡಿರುವ ಸಲಹೆ ತಂಡಕ್ಕೆ ಸ್ಪೂರ್ತಿ ತಂದಿದೆ. ವಿದೇಶಿ ನೆಲದಲ್ಲಿ ಯಾವ ರೀತಿ ಆಡಬೇಕೆಂಬುದರ ಕುರಿತು ಸಚಿನ್ ಅವರು ಉಪಯುಕ್ತ ಮಾಹಿತಿ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಐದು ರನ್ ಮಾಡುವುದಕ್ಕೆ ಚೇತೇಶ್ವರ ಪೂಜಾರ ಎದುರಿಸಿದ ಬಾಲ್ ಗಳೆಷ್ಟು ಗೊತ್ತಾ?!