Publish Date: Wed, 24 Jan 2018 (13:09 IST)
Updated Date: Wed, 24 Jan 2018 (13:13 IST)
ಜೊಹಾನ್ಸ್ ಬರ್ಗ್: ದ.ಆಫ್ರಿಕಾಗೆ ಬಂದಿಳಿದ ಮೇಲೆ ಆಡಿದ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಟಾಸ್ ಸೋತು, ಪಂದ್ಯವನ್ನೂ ಸೋತಿದ್ದ ಭಾರತ ಅಂತಿಮ ಟೆಸ್ಟ್ ನಲ್ಲಿ ಟಾಸ್ ಗೆದ್ದಿದ್ದು, ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
ಅಚ್ಚರಿಯೆಂದರೆ ಹಲವು ಟೀಕೆಗಳಿಗೆ ಬೇಸತ್ತು ನಾಯಕ ಕೊಹ್ಲಿ ಕೊನೆಗೂ ಅಜಿಂಕ್ಯಾ ರೆಹಾನೆಗೆ ಅವಕಾಶವಿತ್ತಿದ್ದಾರೆ. ರೆಹಾನೆಗಾಗಿ ರೋಹಿತ್ ಶರ್ಮಾ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಈ ಪಂದ್ಯದಲ್ಲಿ ಸ್ಪಿನ್ನರ್ ಗಳಿಲ್ಲದೇ ಭಾರತ ಕಣಕ್ಕಿಳಿಯುತ್ತಿರುವುದು ಮತ್ತೊಂದು ಅಚ್ಚರಿ.
ಕಳೆದ ಪಂದ್ಯದಲ್ಲಿ ಆಡಿದ್ದ ರವಿಚಂದ್ರನ್ ಅಶ್ವಿನ್ ಗೆ ಕೊಕ್ ನೀಡಲಾಗಿದ್ದು, ಅವರ ಸ್ಥಾನಕ್ಕೆ ಭುವನೇಶ್ವರ್ ಕುಮಾರ್ ಗೆ ಮರಳಿದ್ದಾರೆ. ಒಟ್ಟು ಐದು ವೇಗಿಗಳ ಪಡೆಯೊಂದಿಗೆ ಭಾರತ ಕಣಕ್ಕಿಳಿದಿದೆ. ಇನ್ನು, ದ. ಆಫ್ರಿಕಾ ತಂಡದಲ್ಲಿ ಭಾರತೀಯ ಮೂಲದ ಕೇಶವ್ ಮಹಾರಾಜ್ ಸ್ಥಾನಕ್ಕೆ ಆಂಡಿಲೆಗೆ ಸ್ಥಾನ ನೀಡಲಾಗಿದೆ. ಉಳಿದಂತೆ ಆಫ್ರಿಕಾ ಯಥಾಸ್ಥಿತಿ ಕಾಯ್ದುಕೊಂಡಿದೆ. ಟಾಸ್ ಗೆದ್ದ ಅದೃಷ್ಟ ಪಂದ್ಯ ಗೆಲ್ಲುವುದರಲ್ಲೂ ಇರುತ್ತಾ ನೋಡೋಣ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ