Select Your Language

Notifications

webdunia
webdunia
webdunia
webdunia

ಸೋತ ಮೇಲೂ ಬುದ್ಧಿ ಕಲಿಯದ ಟೀಂ ಇಂಡಿಯಾ!

ಸೋತ ಮೇಲೂ ಬುದ್ಧಿ ಕಲಿಯದ ಟೀಂ ಇಂಡಿಯಾ!
ಜೊಹಾನ್ಸ್ ಬರ್ಗ್ , ಬುಧವಾರ, 24 ಜನವರಿ 2018 (16:17 IST)
ಜೊಹಾನ್ಸ್ ಬರ್ಗ್: ದ.ಆಫ್ರಿಕಾ ವಿರುದ್ಧ ಎರಡು ಟೆಸ್ಟ್ ಪಂದ್ಯ ಸೋತ ಮೇಲೂ ಟೀಂ ಇಂಡಿಯಾ ಸುಧಾರಿಸಿಲ್ಲ ಎನ್ನುವುದು ಮೂರನೇ ಟೆಸ್ಟ್ ನ ಮೊದಲ ಅವಧಿಯಲ್ಲೇ ಸಾಬೀತಾಗಿದೆ. ಊಟದ ವಿರಾಮದ ವೇಳೆಗೆ ಟೀಂ ಇಂಡಿಯಾ 2 ವಿಕೆಟ್ ಕಳೆದುಕೊಂಡು 45 ರನ್ ಗಳಿಸಿತ್ತು.
 

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಈ ಪಂದ್ಯದಲ್ಲಾದರೂ ಬ್ಯಾಟಿಂಗ್ ಸುಧಾರಿಸೀತು ಎಂಬ ಆಶಾಭಾವನೆ ಇದರೊಂದಿಗೆ ನುಚ್ಚುನೂರಾಗಿದೆ. ಕೊಹ್ಲಿ ಅಷ್ಟೊಂದು ಭರವಸೆಯಲ್ಲಿ ಆಯ್ಕೆ ಮಾಡಿದ್ದ ಕೆಎಲ್ ರಾಹುಲ್ ಶೂನ್ಯಕ್ಕೇ ನಿರ್ಗಮಿಸಿದರೆ, ಅನುಭವಿ ಎನಿಸಿಕೊಂಡ ಮುರಳಿ ವಿಜಯ್ 8 ಕ್ಕೇ ಗಂಟು ಮೂಟೆ ಕಟ್ಟಿದರು.

ಇದೀಗ ಚೇತೇಶ್ವರ ಪೂಜಾರ 5 ಮತ್ತು ವಿರಾಟ್ ಕೊಹ್ಲಿ 24 ರನ್ ಗಳಿಸಿ ಆಡುತ್ತಿದ್ದಾರೆ. ಫಿಲ್ಯಾಂಡರ್ ಮತ್ತು ಕಗಿಸೊ ರಬಡಾ ತಲಾ ಒಂದು ವಿಕೆಟ್ ಕಬಳಿಸಿದ್ದಾರೆ. ಇದೇ ರೀತಿ ಆಡಿದರೆ ವೈಟ್ ವಾಶ್ ಗ್ಯಾರಂಟಿ ಎಂಬ ಆತಂಕ ಶುರುವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಬ್ಬಬ್ಬಾ… ಕೊನೆಗೂ ಟಾಸ್ ಗೆದ್ದಿತು ಟೀಂ ಇಂಡಿಯಾ! ಯಾರು ಇನ್? ಯಾರು ಔಟ್ ಗೊತ್ತಾ?