Select Your Language

Notifications

webdunia
webdunia
webdunia
webdunia

ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿ ಫೈನಲ್ ಗೇರಿದ್ದ ವಿನೇಶ್ ಫೋಗಟ್ ಗೆ ಆಘಾತ: ಫೈನಲ್ ನಿಂದ ಅನರ್ಹ, ಪದಕ ಕನಸು ಭಗ್ನ

Vinesh Phogat

Krishnaveni K

ಪ್ಯಾರಿಸ್ , ಬುಧವಾರ, 7 ಆಗಸ್ಟ್ 2024 (12:35 IST)
ಪ್ಯಾರಿಸ್: ನಿನ್ನೆಯಷ್ಟೇ ಒಂದೇ ದಿನ ಮೂವರು ಸ್ಪರ್ಧಿಗಳನ್ನು ಮಣ್ಣು ಮುಕ್ಕಿಸಿ ಪ್ಯಾರಿಸ್ ಒಲಿಂಪಿಕ್ಸ್ ಮಹಿಳೆಯರ 50 ಕೆ.ಜಿ. ಕುಸ್ತಿ ವಿಭಾಗದಲ್ಲಿ ಫೈನಲ್ ತಲುಪಿದ್ದ ಭಾರತದ ಸಿಂಹಿಣಿ ವಿನೇಶ್ ಫೋಗಟ್ ಗೆ ಈಗ ಆಘಾತ ಎದುರಾಗಿದೆ. ಕೊನೆಯ ಕ್ಷಣದಲ್ಲಿ ಆಕೆಯನ್ನು ಫೈನಲ್ ನಿಂದ ಅನರ್ಹಗೊಳಿಸಲಾಗಿದೆ.

ವಿನೇಶ್ ಫೋಗಟ್ ಕುಸ್ತಿ ಫೆಡರೇಷನ್ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖ ತಾರೆಯರಾಗಿದ್ದರು. ಹೀಗಾಗಿ ಆಕೆಯ ಗೆಲುವನ್ನು ಕೇಂದ್ರ ಸರ್ಕಾರಕ್ಕೆ ಆದ ಮುಖಭಂಗ ಎಂದೇ ಹಲವರು ಟೀಕಿಸಿದ್ದರು. ಈಕೆ ಪದಕ ಗೆದ್ದರೆ ಮೋದಿ ಯಾವ ಬಾಯಿಯಿಂದ ಆಕೆಗೆ ಶುಭ ಹಾರೈಸುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯ ಮಾಡಿದ್ದರು.

 ಆದರೆ ಇದೀಗ ಆಕೆಯನ್ನು ಕುಸ್ತಿ ಫೈನಲ್ ನಿಂದಲೇ ಅನರ್ಹಗೊಳಿಸಲಾಗಿದೆ. ಇದಕ್ಕೆ ಕಾರಣ ಆಕೆಯ ದೇಹ ತೂಕ. 50 ಕೆ.ಜಿ.  ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನೇಶ್ 100 ಗ್ರಾಂನಷ್ಟು ತೂಕ ಹೆಚ್ಚಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಫೈನಲ್ ನಿಂದ ಅನರ್ಹಗೊಳಿಸಲಾಗಿದೆ.

ವಿನೇಶ್ ಮೂಲಕ ಭಾರತ ಚಿನ್ನ ಅಥವಾ ರಜತ ಪದಕ ನಿರೀಕ್ಷಿಸಿತ್ತು. ಆಕೆಯ ಗೆಲುವು ಇಡೀ ಕುಸ್ತಿ ಫೆಡರೇಶನ್ ವಿರುದ್ಧ ಹೋರಾಡಿದ ಆಟಗಾರ್ತಿಯರ ಗೆಲುವಾಗಲಿದೆ ಎಂದು ಸಂಭ್ರಮಿಸಲಾಗಿತ್ತು. ಆದರೆ ಈಗ ಆಕೆಯನ್ನು ಫೈನಲ್ ನಿಂದಲೇ ಒಲಿಂಪಿಕ್ಸ್ ಸಮಿತಿ ಅನರ್ಹಗೊಳಿಸಿದೆ.

ಇದರೊಂದಿಗೆ ಈ ವಿಭಾಗದಲ್ಲಿ ಯಾವುದೇ ಸ್ಪರ್ಧಿ ಬೆಳ್ಳಿ ಪದಕ ಗೆಲ್ಲುತ್ತಿಲ್ಲ. ಫೈನಲ್ ನಲ್ಲಿ ಆಡಬೇಕಿದ್ದ ಇನ್ನೊಬ್ಬ ಕುಸ್ತಿ ಪಟು ಚಿನ್ನದ ಪದಕ ವಿಜೇತರಾಗಲಿದ್ದಾರೆ. ಪದಕ ಗೆಲ್ಲುವ ಕನಸಿನಲ್ಲಿದ್ದ ವಿನೇಶ್ ಗೆ ಇದು ಅಕ್ಷರಶಃ ಆಘಾತವಾಗಿದೆ. ಆಕೆ ನಿನ್ನೆ ಆಡಿದ ಪರಿ ನೋಡಿದರೆ ಪದಕಕ್ಕೆ ಅರ್ಹರಾಗಿದ್ದರು. ಆದರೆ ಫೈನಲ್ ತಲುಪಿದ ಮೇಲೆ ಅನರ್ಹ ಹಣೆ ಪಟ್ಟಿ ಹೊತ್ತಿರುವುದು ನಿಜಕ್ಕೂ ದುರದೃಷ್ಟಕರ.

Share this Story:

Follow Webdunia kannada

ಮುಂದಿನ ಸುದ್ದಿ

Paris Olympics 2024: ಇಂದು ಮೀರಾ ಭಾಯಿ ಚಾನು ಕಣಕ್ಕೆ, ಎಷ್ಟು ಗಂಟೆಗೆ ಪಂದ್ಯ ನೇರಪ್ರಸಾರ ಮಾಹಿತಿ ಇಲ್ಲಿದೆ