Select Your Language

Notifications

webdunia
webdunia
webdunia
webdunia

ವಿಶ್ವ ಗೆಲ್ಲಲು ಹೊರಟ ವಿನೇಶಳನ್ನು ಭಾರತದಲ್ಲಿಯೇ ಹೊಡೆದು ಎಳೆದಾಡಿದ್ದರು: ಬಜರಂಗ್ ಬೇಸರ

Paris Olympics 2024

Sampriya

ನವದೆಹಲಿ , ಮಂಗಳವಾರ, 6 ಆಗಸ್ಟ್ 2024 (20:39 IST)
Photo Courtesy X
ನವದೆಹಲಿ: ಇಂದು ಇಡೀ ಜಗತ್ತನ್ನೇ ಗೆಲ್ಲಲು ಹೊರಟಿರುವ ಕುಸ್ತಿಪಟು ವಿನೇಶ ಪೋಗಟ್‌ರನ್ನು ಅಂದು ತನ್ನದೇ ದೇಶದಲ್ಲಿ ಬೀದಿಗಳಲ್ಲಿ ಎಳೆದು ದಮನಿಸಲಾಯಿತು ಎಂದು ಕುಸ್ತಿಪಟು ಬಜರಂಗ್ ಪೂನಿಯಾ ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಸಂಬಂಧ ಪೋಸ್ಟ್ ವರು ಪೋಸ್ಟ್ ಮಾಡಿದ್ದಾರೆ.

'ವಿನೇಶಾ ಅವರು ನಾಲ್ಕು ಬಾರಿಯ ವಿಶ್ವ ಚಾಂಪಿಯನ್, ಒಲಿಂಪಿಕ್ಸ್ ವಿಜೇತೆ ಜಪಾನಿನ ಯುಇ ಸುಸಾಕಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಅದಾದ ಬಳಿಕ ಮಾಜಿ ವಿಶ್ವ ಚಾಂಪಿಯನ್ ಉಕ್ರೇನ್‌ನ ಸ್ಪರ್ಧಿಯ ವಿರುದ್ಧ ಜಯ ಗಳಿಸಿದ್ದಾರೆ' ಎಂದು ಅವರು ತಿಳಿಸಿದ್ದಾರೆ.‌‌

'ಆದರೆ ನಿಮಗೊಂದು ವಿಷಯ ಹೇಳಲು ಬಯಸುತ್ತೇನೆ. ಅಂದು ಈ ಹುಡುಗಿಗೆ ತನ್ನದೇ ದೇಶದಲ್ಲಿ ಲಾಠಿಯಿಂದ ಹೊಡೆದು ಕ್ರೂರವಾಗಿ ನಡೆಸಿಕೊಳ್ಳಲಾಯಿತು. ಅದೇ ಹುಡುಗಿ ಇಡೀ ಜಗತ್ತನ್ನು ಗೆಲ್ಲಲು ಹೊರಟಿದ್ದಾಳೆ. ಆದರೆ ಈ ದೇಶದ ವ್ಯವಸ್ಥೆಯಲ್ಲಿ ಸೋತಿದ್ದಾಳೆ' ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಮೊದಲ ಬಾರಿಗೆ, ನಾವು ಸಂತೋಷವಾಗಿದ್ದೇವೆಯೇ ಅಥವಾ ಅಳುತ್ತೇವೆಯೇ ಎಂದು ನಮಗೆ ಅರ್ಥವಾಗುತ್ತಿಲ್ಲ. ಇಡೀ ಭಾರತವೇ ಈ ಪದಕಕ್ಕಾಗಿ ಕಾಯುತ್ತಿದೆ. ಎಲ್ಲರ ಕಣ್ಣುಗಳೂ ತೇವವಾಗಿವೆ.  ವಿನೇಶ ನೀವು ನಿಜವಾಗಿಯೂ ದಾಖಲೆಗಳನ್ನು ಮಾಡಲು ಹುಟ್ಟಿದ್ದೀರಿ. ಇಷ್ಟೆಲ್ಲಾ ಕಷ್ಟಗಳನ್ನು ಎದುರಿಸಿದ ನಂತರವೂ ಗುರಿಯತ್ತ ದೃಷ್ಟಿ ನೆಟ್ಟಿದೆ. ಈ ಚಿನ್ನ ಭಾರತಕ್ಕೆ ಬರಲಿ ಎಂಬುದೇ ನಮ್ಮ ಪ್ರಾರ್ಥನೆ ಎಂದು ಬರೆದುಕೊಂಡಿದ್ದಾರೆ.






Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದ ಕುಸ್ತಿಪಟು ವಿನೇಶಗೆ ಒಲಿಂಪಿಕ್ಸ್‌ ಪದಕ ಖಚಿತ