ಪ್ಯಾರಿಸ್: ಕಂಚಿನ ಪದಕ್ಕಾಗಿ ಇಂದು ನಡೆದ ಪುರುಷರ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಭಾರತದ ಲಕ್ಷ್ಯ ಸೇನ್ ಅವರು ಮಲೇಷ್ಯಾದ ಲೀ ಝಿ ಜಿಯಾ ವಿರುದ್ಧ ಸೋಲು ಅನುಭವಿಸಿದರು.
ಮೊದಲ ಸುತ್ತಿನಲ್ಲಿ ಮಲೇಷ್ಯಾದ ಲೀ ಝಿ ಜಿಯಾ ಅವರನ್ನು 21-13 ಅಂತರದಲ್ಲಿ ಲಕ್ಷ್ಯಸೇನ್ ಮಣಿಸಿದರು. ಎರಡನೇ ಸುತ್ತಿಗೆ ಕೈ ನೋವಿನಿಂದ ಬಳಲಿದ ಲಕ್ಷ್ಯ ಸೇನೆ ಅವರು 16-21 ಸೋಲು ಅನುಭವಿಸಿದರು. ಪಂದ್ಯ ಸಮಬಲಗೊಂಡ ಹಿನ್ನೆಲೆ ಮೂರನೇ ಸುತ್ತಿನಲ್ಲಿ ಬಲಗೈ ಏಟಿನಿಂದ ಬಳಲುತ್ತಿದ್ದ ಲಕ್ಷ್ಯ ಸೇನ್ ಅವರು 11-21 ಅಂತರದಿಂದ ಸೋತರು.
ಈ ಮೂಲಕ ಬ್ಯಾಡ್ಮಿಂಟನ್ ಏಕೈಕ ಪದಕದ ನಿರೀಕ್ಷೆಯಲ್ಲಿ ಭಾರತಕ್ಕೆ ನಿರಾಸೆಯಾಗಿದೆ. ಈ ಮೂಲಕ ಕಂಚಿನ ನಿರೀಕ್ಷೆಯಲ್ಲಿದ್ದ ಲಕ್ಷ್ಯಸೇನ್‌ಗೆ ಆಘಾತವಾಗಿದೆ.
ಭಾನುವಾರ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ 22 ವರ್ಷ ಲಕ್ಷ್ಯ ಸೇನ್ 20-22, 14-21 ನೇರ ಗೇಮ್‌ಗಳಿಂದ ಹಾಲಿ ಒಲಿಂಪಿಕ್ಸ್ ಚಾಂಪಿಯನ್, ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್‌ಸೆನ್ ಎದುರು ಮುಗ್ಗರಿಸಿದರು. ಇನ್ನೂ ಕಂಚಿನ ಪದಕದ ಹೋರಾಟದಲ್ಲಿ ಪದಕದ ನಿರೀಕ್ಷೆಯಲ್ಲಿದ್ದ ಲಕ್ಷ್ಯಸೇನ್‌ಗೆ ನಿರಾಸೆಯಾಗಿದೆ.