ಪ್ಯಾರಿಸ್:ಇಲ್ಲಿ ನಡೆಯುತ್ತಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಸ್ಪರ್ಧಾ ಕಣಕ್ಕೆ ಇಳಿದಿದ್ದು, ಮೊದಲ ಎಸೆತದಲ್ಲೇ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.
ಮಂಗಳವಾರ ನಡೆದ ಕ್ವಾಲಿಫಿಕೇಷನ್ ಸ್ಪರ್ಧೆಯಲ್ಲಿ ಹಾಲಿ ಚಾಂಪಿಯನ್ ನೀರಜ್ ಚೋಪ್ರಾ ಈ ಋತುವಿನ ಶ್ರೇಷ್ಠಾ ಸಾಧನೆ ತೋರಿದರು. ಅವರು ಮೊದಲ ಎಸೆತದಲ್ಲೇ 89.34 ಮೀಟರ್ ಜಾವೆಲಿನ್ ಎಸೆಯುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
26ವರ್ಷದ ನೀರಜ್ ಚೋಪ್ರಾ ಅವರು ಬಿ ಗ್ರೂಪ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಕೊನೆಯವರೆಗೂ ಯಶಸ್ವಿಯಾದರು. ಹೀಗಾಗಿ ಭಾರತಕ್ಕೆ ಚಿನ್ನದ ಪದಕದ ಭರವಸೆಯನ್ನು ಮೊದಲ ಎಸೆತದಲ್ಲೇ ನೀಡಿದರು.
ಇದು ನೀರಜ್ ಚೋಪ್ರಾ ಅವರ ವರ್ಷದ ಬೆಸ್ಟ್ ಥ್ರೋ ಆಗಿದೆ. ಇದನ್ನೂ ಮುನ್ನ ದೋಹಾ ಡೈಮಂಡ್ ಲೀಗ್‌ನಲ್ಲಿ 88.36 ಮೀಟರ್ ದೂರ ಜಾವೆಲಿನ್ ಎಸೆದಿದ್ದು ಅವರ ಶ್ರೇಷ್ಠ ಥ್ರೋ ಆಗಿತ್ತು.
ಇದಕ್ಕೂ ಮುನ್ನಾಗ್ರೂಪ್ ಎ ವಿಭಾಗದ ಅರ್ಹತಾ ಹಂತದಲ್ಲಿ ಸ್ಪರ್ಧೆ ಮಾಡಿದ್ದ ಭಾರತದ ಮತ್ತೊಬ್ಬ ಸ್ಪರ್ಧಿ ಕಿಶೋರ್ ಜೆನಾ 9ನೇ ಸ್ಥಾನ ಪಡೆದುಕೊಂಡು ಫೈನಲ್‌ಗೇರಲು ವಿಫಲರಾದರು.