Select Your Language

Notifications

webdunia
webdunia
webdunia
Monday, 7 April 2025
webdunia

ಅಂದು ಅವಮಾನಿಸಿದ್ದ ವಿನೇಶಗೆ ಯಾವ ಮುಖದಲ್ಲಿ ಅಭಿನಂದಿಸುತ್ತಾರೆ: ಮೋದಿಯ ಕಾಲೆಳೆದ ಕಾಂಗ್ರೆಸ್

Paris Olympics 2024

Sampriya

ಬೆಂಗಳೂರು , ಮಂಗಳವಾರ, 6 ಆಗಸ್ಟ್ 2024 (19:43 IST)
Photo Courtesy X
ಬೆಂಗಳೂರು:   ಅಂದು ದೆಹಲಿಯ ಬೀದಿಗಳಲ್ಲಿ  ಹೀನಾಯವಾಗಿ ನಡೆಸಿಕೊಂಡ ಭಾರತದ ಕುಸ್ತಿಪಟು ವಿನೇಶ ಪೊಗಟ್ ಅವರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಯಾವ ಮುಖದಲ್ಲಿ ಕರೆ ಮಾಡಿ ಶುಭ ಕೋರುತ್ತಾರೆಂದು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.

ಪ್ಯಾರಿಸ್‌ನಲ್ಲಿ ಇಂದು ನಡೆದ ಆರಂಭಿಕ ಮಹಿಳೆಯರ 50ಕೆಜಿ ಕುಸ್ತಿ ಪಂದ್ಯದಲ್ಲಿ ನಾಲ್ಕು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಜಪಾನ್‌ನ ಯುಯಿ ಸುಸಾಕಿ ಅವರನ್ನು ಸೋಲಿಸಿದ  ವಿನೇಶ ಅವರು ಕ್ವಾಟರ್ ಫೈನಲ್ ಪ್ರವೇಶಿಸಿದರು. ನಂತರ ನಡೆದ ಕ್ವಾಟರ್‌ ಫೈನಲ್‌ನಲ್ಲಿ ಉಕ್ರೇನ್‌ನ ಒಕ್ಸಾನಾ ಲಿವಾಚ್ ಅವರನ್ನು 7-5ರಿಂದ ಸೋಲಿಸಿ ವಿನೇಶ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಸೆಮಿಫೈನಲ್‌ಗೆ ಪ್ರವೇಶಿಸಿದ ವಿನೇಶ ಅವರನ್ನು ಅಭಿನಂದಿಸಿ ಕಾಂಗ್ರೆಸ್ ಪೋಸ್ಟ್ ಮಾಡಿದೆ.

ಪೋಸ್ಟ್‌ನಲ್ಲಿ ಏನಿದೆ: ನಾಲ್ಕು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಜಪಾನ್ ನ ಯುಯಿ ಸುಸಾಕಿ ಅವರನ್ನು 50ಕೆಜಿ ವಿಭಾಗದ ಕುಸ್ತಿ ಪಂದ್ಯದಲ್ಲಿ ಸೋಲಿಸಿ ಸೆಮಿಫೈನಲ್ ತಲುಪಿದ ಕುಸ್ತಿ ಪಟು ವಿನೆಷಾ ಪೊಗಟ್ ಅವರಿಗೆ ಅಭಿನಂದನೆಗಳು.

ತ್ರಿವರ್ಣ ಧ್ವಜವನ್ನು ಜಗತ್ತಿನ ಮುಂದೆ ಹಾರಿಸಿ ದೇಶಕ್ಕೆ ಕೀರ್ತಿ ತಂದಿರುವ ಇದೇ ವಿನೆಷಾ ಪೊಗಟ್ ಅವರನ್ನು ಕೇಂದ್ರ ಸರ್ಕಾರ ದೆಹಲಿಯ ಬೀದಿಗಳಲ್ಲಿ ಹೀನಾಯವಾಗಿ ನಡೆಸಿಕೊಂಡಿತ್ತು. ಮಾನ್ಯ ನರೇಂದ್ರ ಮೋದಿಯ ಅವರೇ, ಈಗ ಯಾವ ಮುಖ ಇಟ್ಟುಕೊಂಡು, ವಿನೆಷಾ ಪೊಗಟ್ ಅವರಿಗೂ ಕರೆ ಮಾಡಿ ಅಭಿನಂದಿಸುವಿರಿ?

ಏನಿದು ಪ್ರಕರಣ:  ಭಾರತೀಯ ಕುಸ್ತಿ ಫೆಡರೇಶನ್‌ನ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಮಾಡಿ ಪ್ರತಿಭಟನೆ ಮಾಡಿದ್ದರು. ‌ಒಲಿಂಪಿಯನ್ ಕುಸ್ತಿಪಟು ವಿನೇಶ  ಫೋಗಟ್ ಅವರು ಈ ಗಂಭೀರ ಆರೋಪ ಮಾಡಿದ್ದು, ಹಲವು ವರ್ಷಗಳಿಂದ ಮಹಿಳಾ ಕುಸ್ತಿಪಟುಗಳನ್ನು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಹಿರಂಗಪಡಿಸಿ, ರಸ್ತೆಗಿಳಿದು ಹೋರಾಟ ನಡೆಸಿದ್ದರು.

ಕುಸ್ತಿಪಟುಗಳ ಗಂಭೀರ ಆರೋಪದಡಿಯಲ್ಲಿ ಭಾರತದ ರೆಸ್ಲಿಂಗ್ ಫೆಡರೇಶನ್ ಅಧ್ಯಕ್ಷ ಸ್ಥಾನದಿಂದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಜನವರಿ 22 ರಂದು ಕೆಳಗಿಳಿದರು. ವಿನೇಶ್ ಫೋಗಟ್, ಬಜರಂಗ್ ಪುನಿಯಾ ಮತ್ತು ಹಲವಾರು ಕುಸ್ತಿಪಟುಗಳು ಜನವರಿ 18 ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಅಧ್ಯಕ್ಷರು ಮತ್ತು ಕುಸ್ತಿ ಸಂಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

6 ವಿದ್ಯಾರ್ಥಿಗಳ ಕೂದಲಿಗೆ ಕತ್ತರಿ ಹಾಕಿದ ಶಿಕ್ಷಕನಿಗೆ ಗ್ರಾಮಸ್ಥರಿಂದ ಗೂಸಾ