Select Your Language

Notifications

webdunia
webdunia
webdunia
webdunia

Paris Olympics 2024: ಇಂದು ಮೀರಾ ಭಾಯಿ ಚಾನು ಕಣಕ್ಕೆ, ಎಷ್ಟು ಗಂಟೆಗೆ ಪಂದ್ಯ ನೇರಪ್ರಸಾರ ಮಾಹಿತಿ ಇಲ್ಲಿದೆ

Meera Bhai Chanu

Krishnaveni K

ಪ್ಯಾರಿಸ್ , ಬುಧವಾರ, 7 ಆಗಸ್ಟ್ 2024 (11:26 IST)
ಪ್ಯಾರಿಸ್: ಒಲಿಂಪಿಕ್ಸ್ ನಲ್ಲಿ ಇಂದು ಕಳೆದ ಬಾರಿಯ ಬೆಳ್ಳಿ ಪದಕ ವಿಜೇತೆ ಮೀರಾ ಭಾಯಿ ಚಾನು ಕಣಕ್ಕಿಳಿಯುತ್ತಿದ್ದಾರೆ. ಕುಸ್ತಿ ಪಟುಗಳ ನಂತರ ಈಗ ವೈಟ್ ಲಿಫ್ಟರ್ ಗಳ ಮೇಲೆ ಭಾರತದ ನಿರೀಕ್ಷೆ ಹೆಚ್ಚಾಗಿದೆ.

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮೀರಾ ಭಾಯಿ ಚಾನು ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಇಂದು ಅವರು 49 ಕೆಜಿ ವಿಭಾಗದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಒಂದು ವೇಳೆ ಅವರು ಇಂದು ಪದಕ ಗೆದ್ದರೆ ಸತತ ಎರಡು ಒಲಿಂಪಿಕ್ಸ್ ಗಳಲ್ಲಿ ಗೆದ್ದು ಇತಿಹಾಸ ನಿರ್ಮಿಸಲಿದ್ದಾರೆ.

ಆದರೆ ಸದ್ಯಕ್ಕೆ ಮೀರಾ ಭಾಯಿ ಫಿಟ್ನೆಸ್ ಅಷ್ಟೊಂದು ಉತ್ತಮವಾಗಿಲ್ಲ. ಕಳೆದ ಏಷ್ಯನ್ ಗೇಮ್ಸ್ ನಿಂದೀಚೆಗೆ ಮೀರಾ ಪದೇ ಪದೇ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಇಂದು ಅವರು ತಮ್ಮ ಫಿಟ್ನೆಸ್ ನ್ನೂ ಮೀರಿ ಪದಕ ಗೆಲ್ಲಲು ಸಾಧ್ಯವಾಗುತ್ತದೆಯೇ ಎಂದು ಕಾದು ನೋಡಬೇಕಿದೆ. ಇಂದು ಮೀರಾ ಪಂದ್ಯ ರಾತ್ರಿ 11 ಗಂಟೆಗೆ ನಡೆಯಲಿದೆ. ಜಿಯೋ ಸಿನಿಮಾ ಆಪ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

ಇಂದಿನ ಈವೆಂಟ್ ನಲ್ಲಿ ಕನ್ನಡತಿ ಗಾಲ್ಫ್ ಪಟು ಅದಿತಿ ಅಶೋಕ್ ಕೂಡಾ ಕಣಕ್ಕಿಳಿಯುತ್ತಿದ್ದಾರೆ. ಈ ಪಂದ್ಯ ಮಧ್ಯಾಹ್ನ 12.30 ಕ್ಕೆ ಆರಂಭವಾಗಲಿದೆ. ಮಧ್ಯಾಹ್ನ 1.30 ಕ್ಕೆ ಮಹಿಳೆಯರ ಟೇಬಲ್ ಟೆನಿಸ್ ತಂಡದ ಕ್ವಾರ್ಟರ್ ಫೈನಲ್ ನಲ್ಲಿ ಭಾರತ ತಂಡ ಆಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs SL ODI: ಟೀಂ ಇಂಡಿಯಾಕ್ಕೆ ಇಂದು ಶ್ರೀಲಂಕಾ ವಿರುದ್ಧ ಗೆಲ್ಲಲೇಬೇಕು: ತಂಡದಲ್ಲಿ ಈ ಬದಲಾವಣೆ ಸಾಧ್ಯತೆ