Select Your Language

Notifications

webdunia
webdunia
webdunia
webdunia

ಪ್ಯಾರಿಸ್ ಒಲಿಂಪಿಕ್ಸ್ 2024: ಭಾರತಕ್ಕೆ ಮೂರನೇ ಪದಕ ಗೆದ್ದುಕೊಟ್ಟ ಸ್ವಪ್ನಿಲ್ ಕುಸಾಲೆ

Swapnil Kusale

Krishnaveni K

ಪ್ಯಾರಿಸ್ , ಗುರುವಾರ, 1 ಆಗಸ್ಟ್ 2024 (14:06 IST)
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 2024 ರಲ್ಲಿ ಭಾರತಕ್ಕೆ ಇಂದು ಮತ್ತೊಬ್ಬ ಶೂಟರ್ ಪದಕ ಗೆದ್ದುಕೊಟ್ಟಿದ್ದಾರೆ. 50 ಮೀ. ರೈಫಲ್ ವಿಭಾಗದಲ್ಲಿ ಭಾರತ ಸ್ವಪ್ನಿಲ್ ಕುಸಾಲೆ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೂರನೇ ಪದಕ ಗೆದ್ದುಕೊಟ್ಟಿದ್ದಾರೆ.

ಈಗಾಗಲೇ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಭಾರತಕ್ಕೆ ಶೂಟಿಂಗ್ ನಲ್ಲಿ ಎರಡು ಕಂಚಿನ ಪದಕ ಗೆದ್ದುಕೊಟ್ಟಿದ್ದರು. ಇದೀಗ ಸ್ವಪ್ನಿಲ್ ಕೂಡಾ 50 ಮೀ ರೈಫಲ್ ವಿಭಾಗದಲ್ಲಿ ಫೈನಲ್ ಸುತ್ತಿನಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಮತ್ತೊಂದು ಕಂಚಿನ ಪದಕ ಗೆದ್ದುಕೊಟ್ಟಿದ್ದಾರೆ.

ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ, ವಿಶ್ವ ಚಾಂಪಿಯನ್ ಶಿಪ್, ವಿಶ್ವಕಪ್ ಕೂಟಗಳಲ್ಲಿ ಅಪ್ರತಿಮ ಸಾಧನೆ ಮೆರೆದಿದ್ದ ಸ್ವಪ್ನಿಲ್ ಇದೀಗ ಮೊದಲ ಬಾರಿಗೆ ಒಲಿಂಪಿಕ್ಸ್ ಪದಕ ಗೆದ್ದು ಬೀಗಿದ್ದಾರೆ. ಇಂದು ನಡೆದ ಫೈನಲ್ ಸುತ್ತಿನಲ್ಲಿ 451.4 ಅಂಕಗಳನ್ನು ಸಂಪಾದಿಸಿದ ಸ್ವಪ್ನಿಲ್ ಮೂರನೇ ಸ್ಥಾನ ಪಡೆದರು.

ಭಾರತದ ಪರ ಇದುವರೆಗೆ ಬಂದಿರುವ ಎಲ್ಲಾ ಮೂರೂ ಪದಕಗಳು ಶೂಟಿಂಗ್ ವಿಭಾಗದಲ್ಲಿಯೇ ಬಂದಿದೆ. ಮನು ಭಾಕರ್ ಎರಡು ಪದಕಗಳನ್ನು ಗೆದ್ದುಕೊಂಡಿದ್ದಾರೆ. ಇದೀಗ ಸ್ವಪ್ನಿಲ್ ಮೂರನೇ ಪದಕದೊಂದಿಗೆ ದೇಶಕ್ಕೆ ಹೆಮ್ಮೆ ತಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಮ್ಮು-ಬಿಮ್ಮು ಏನೂ, ಗೌತಮ್ ಗಂಭೀರ್ ಹೇಳಿದ್ದನ್ನು ಚಾಚೂ ತಪ್ಪದೇ ಪಾಲಿಸ್ತಾರೆ ವಿರಾಟ್ ಕೊಹ್ಲಿ