Select Your Language

Notifications

webdunia
webdunia
webdunia
webdunia

ಎಲ್ಲರೂ ಫುಟ್ಬಾಲ್ ಫೈನಲ್ ನೋಡ್ತಿರುವಾಗ ಮೇಕೆ ಬಂದು ಹೀಗೆ ಮಾಡೋದಾ Video

Viral video goat
Photo Credit: X
ಎಲ್ಲರೂ ಫಿಫಾ ಫೈನಲ್ ಪಂದ್ಯವನ್ನು ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದರೆ ಮೇಕೆ ಬಂದು ಎಲ್ಲಾ ಸಂತೋಷ ಹಾಳು ಮಾಡಿತು. ಈ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಿನ್ನೆ ಅರ್ಜೆಂಟೀನಾ ಮತ್ತು ಸ್ಪೇನ್ ನಡುವೆ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ನಡೆದಿತ್ತು. ವಿಶ್ವದಾದ್ಯಂತ ಅಭಿಮಾನಿಗಳು ಈ ಪಂದ್ಯವನ್ನು ಕುತೂಹಲದಿಂದ ವೀಕ್ಷಿಸಿದ್ದರು. ಭಾರತದಲ್ಲೂ ಹಲವು ಕಡೆ ಅಭಿಮಾನಿಗಳು ವಿಶೇಷ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿ ಪಂದ್ಯ ವೀಕ್ಷಿಸಿದ್ದರು.

ಇದೇ ರೀತಿ ಒಂದು ಕಡೆ ಕೆಲವು ಜನರು ಪ್ರಾಜೆಕ್ಟರ್ ಹಾಕಿಕೊಂಡು ಪಂದ್ಯ ವೀಕ್ಷಿಸುತ್ತಿದ್ದರು. ಈ ವೇಳೆ ಒಂದು ಮೇಕೆಯೂ ಪ್ರಾಜೆಕ್ಟರ್ ಬಳಿ ನಿಂತು ಹತ್ತಿರದಿಂದ ಸ್ಕ್ರೀನ್ ನೋಡುತ್ತಿತ್ತು. ಆರಂಭದಲ್ಲಿ ಮೇಕೆಯೂ ಸುಮ್ಮನೇ ನಿಂತು ನೋಡುತ್ತಿತ್ತು. ಹೀಗಾಗಿ ಜನರೂ ಅದನ್ನು ಅಟ್ಟುವ ಪ್ರಯತ್ನ ಮಾಡಲಿಲ್ಲ.

ಆದರೆ ಕೆಲವು ಹೊತ್ತು ಸುಮ್ಮನೆ ನಿಂತಿದ್ದ ಮೇಕೆಗೆ ಅದೇನನಿಸಿತೋ ಸ್ಕ್ರೀನ್ ನ್ನೇ ಕಚ್ಚಿ ಎಳೆದುಕೊಂಡು ಓಡಿ ಹೋಯಿತು. ಇದನ್ನು ನೋಡಿ ಗಾಬರಿಯಾದ ಜನ ಮೇಕೆ ಹಿಂದೆಯೇ ಓಡಿದ್ದಾರೆ. ಈ ಫನ್ನಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


pic.twitter.com/yoDrPZ5fTf

 

— Maama Uganda (@MaamaUganda02) July 19, 2026

Share this Story:

Follow Webdunia kannada

ಮುಂದಿನ ಸುದ್ದಿ

IND vs ENG: ರೋಹಿತ್ ಶರ್ಮಾ ಔಟಾಗಿ ಹೋಗುತ್ತಿದ್ದಾಗ ವಿರಾಟ್ ಕೊಹ್ಲಿ ಏನು ಮಾಡಿದ್ರು ನೋಡಿ Video