Daily Horoscope

Select Your Language

Notifications

webdunia
webdunia
webdunia
webdunia

ಹಸುವಿನ ಮೇಲೆ ಇಂಥಾ ಕ್ರೌರ್ಯವೆಸಗೋದಾ... ಆರೋಪಿಗೆ ತಕ್ಕ ಶಾಸ್ತಿ ಮಾಡಿದ ಉತ್ತರ ಪ್ರದೇಶ ಪೊಲೀಸರು Video

Viral video of cow assault
Photo Credit: X
ಮಥುರಾದ ಜಮ್ನಾಪಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಇಸಾಪುರದಲ್ಲಿ ಗೋಮಾತೆಯ ಮೇಲೆ ಕ್ರೌರ್ಯ ಎಸಗಿದ ಆರೋಪಿಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಥುರಾದ ಜಮ್ನಾಪಾರ್ (ಲಕ್ಷ್ಮೀನಗರ) ವ್ಯಾಪ್ತಿಯ ಇಸಾಪುರದ ದುರ್ವಾಸ ದೇವಸ್ಥಾನದ ಬಳಿ ಹಸುವಿನ ಮೇಲೆ ಭೀಕರ ದೌರ್ಜನ್ಯ ಎಸಗುತ್ತಿದ್ದ ಆರೋಪಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣವಾದ ಎಕ್ಸ್ (ಟ್ವಿಟರ್) ನಲ್ಲಿ ಸಾರ್ವಜನಿಕರು ವಿಡಿಯೋವನ್ನು ಹಂಚಿಕೊಂಡು, ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಉತ್ತರ ಪ್ರದೇಶ ಪೊಲೀಸರನ್ನು ಒತ್ತಾಯಿಸಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಹಸುವಿನ ಮೇಲಿನ ದೌರ್ಜನ್ಯದ ದೃಶ್ಯಗಳು ಹರಿದಾಡುತ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಹಸುವಿನ ಮೇಲೆ ದೊಡ್ಡ ದೊಣ್ಣೆಯಿಂದ ಆರೋಪಿ ಸಾಯಬಡಿಯುತ್ತಾನೆ. ನೋವಿನಿಂದ ಹಸು ಕುಸಿಯುವಂತಾಗುತ್ತದೆ. ಆದರೂ ಕರುಣೆಯಿಲ್ಲದೇ ಆತ ಹೊಡೆಯುತ್ತಿದ್ದ.

ಈ ವಿಷಯವು ಮಥುರಾ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ, ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಜಮ್ನಾಪಾರ್ ಠಾಣೆಯ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ವಿಡಿಯೋದಲ್ಲಿರುವ ಸ್ಥಳವನ್ನು ಇಸಾಪುರ ಎಂದು ಗುರುತಿಸಿ, ಕೃತ್ಯ ಎಸಗಿದ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

pic.twitter.com/wtD6Nglkrk

 

— Orugallu Adda (@OrugalluAdda) June 28, 2026

Share this Story:

Follow Webdunia kannada

ಮುಂದಿನ ಸುದ್ದಿ

ತಾಯಿಯ ಫೋನ್ ಬಳಸಿ ಗೂಗಲ್ ಟಿವಿ ಖರೀದಿಸಿದ ಮಗ: ಡೆಲಿವರಿ ಬಂದಾಗ ಅಮ್ಮ ಶಾಕ್, ಮಗನ ರಿಯಾಕ್ಷನ್ Video