Select Your Language

Notifications

webdunia
webdunia
webdunia
webdunia

ಟೋಕಿಯೊ ಪ್ಯಾರಾಲಿಂಪಿಕ್ಸ್​: ಕಂಚಿಗೆ ಗುರಿ ಇಟ್ಟ ಸಿಂಗ್ ರಾಜ್!

ಟೋಕಿಯೊ ಪ್ಯಾರಾಲಿಂಪಿಕ್ಸ್​: ಕಂಚಿಗೆ ಗುರಿ ಇಟ್ಟ ಸಿಂಗ್ ರಾಜ್!
bengaluru , ಮಂಗಳವಾರ, 31 ಆಗಸ್ಟ್ 2021 (14:13 IST)
ಭಾರತದ ಸಿಂಗ್ ರಾಜ್ ಟೋಕಿಯೊ ಪ್ಯಾರಾಲಿಂಪಿಕ್ಸ್ ನ 10ಮೀ. ಏರ್ ಪಿಸ್ತೂಲ್ ಎಸ್ ಎಚ್ 1 ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಮಂಗಳವಾರ ನಡೆದ ಫೈನಲ್ ನಲ್ಲಿ 8 ಸ್ಪರ್ಧಿಗಳಲ್ಲಿ ಕೊನೆಯ ಕ್ಷಣದಲ್ಲಿ ಸ್ಥಾನ ಗಿಟ್ಟಿಸಿದ್ದ ಸಿಂಗ್ ರಾಜ್ 216.8 ಅಂಕ ಪಡೆದು ಮೂರನೇ ಸ್ಥಾನಿಯಾಗಿ ಕಂಚಿನ ಪದಕ ಗಳಿಸಿದರು.
ಸಿಂಗ್ ರಾಜ್ ಈ ಸಾಧನೆಯೊಂದಿಗೆ ಭಾ
ರತ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಒಟ್ಟಾರೆ ಪದಕಗಳ ಸಂಖ್ಯೆಯನ್ನು 8ಕ್ಕೆ ಹೆಚ್ಚಿಸಿಕೊಂಡಿದ್ದು, ಸಾರ್ವಕಾಲಿಕ ದಾಖಲೆ ಮಾಡಿದ್ದ ರಿಯೋ ಒಲಿಂಪಿಕ್ಸ್ ಪದಕಗಳಿಂದ ದುಪ್ಪಟ್ಟು ಪದಕ ಗೆದ್ದು ದಾಖಲೆ ಬರೆದಿದೆ.
ಇದೇ ಸ್ಪರ್ಧೆಯಲ್ಲಿ 575 ಅಂಕದೊಂದಿಗೆ ಮೊದಲ ಸ್ಥಾನಿಯಾಗಿ ಫೈನಲ್ ತಲುಪಿದ್ದ ಭಾರತದ ಮತ್ತೊಬ್ಬ ಸ್ಪರ್ಧಿ ಮನೀಶ್ ನರ್ವಾಲ್ 7ನೇ ಸ್ಥಾನಿಯಾಗಿ ನಿರಾಸೆ ಮೂಡಿಸಿದರು. ಆದರೆ ಸಿಂಗ್ ರಾಜ್ ಅರ್ಹತಾ ಸುತ್ತಿನ 19ನೇ ಸುತ್ತಿನಲ್ಲೇ ಹೊರಬಿದ್ದಿದ್ದರು. ಆದರೆ 20ನೇ ಸುತ್ತಿನಲ್ಲಿ ಫೈನಲ್ ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೆಲ್ಸಕ್ಕೆ ಬಾರದವರು ಎಂದ ಮೈಕಲ್ ವಾನ್ ಗೆ ಜರ್ಸಿ ಕೊಟ್ಟ ರವೀಂದ್ರ ಜಡೇಜಾ