Select Your Language

Notifications

webdunia
webdunia
webdunia
Saturday, 12 April 2025
webdunia

ಟೋಕಿಯೊ ಪ್ಯಾರಾಲಿಂಪಿಕ್ಸ್: ಹೈಜಂಪ್ ನಲ್ಲಿ ಬೆಳ್ಳಿ ಪದಕ ಗೆದ್ದ ನಿಶಾದ್!

Tokyo Paralympics
bengaluru , ಭಾನುವಾರ, 29 ಆಗಸ್ಟ್ 2021 (19:34 IST)
ಭಾರತದ ನಿಶಾದ್ ಕುಮಾರ್ ಟೋಕಿಯೊ ಪ್ಯಾರಾಲಿಂಪಿಕ್ಸ್ ನ ಹೈ ಜಂಪ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಈ ಮೂಲಕ ಒಂದೇ ದಿನ ಭಾರತಕ್ಕೆ ಎರಡನೇ ಪದಕ ತಂ
ದುಕೊಟ್ಟಿದ್ದಾರೆ.
ಭಾನುವಾರ ನಡೆದ ಹೈ ಜಂಪ್ ಟಿ-47 ವಿಭಾಗದಲ್ಲಿ ನಿಶಾದ್ ಕುಮಾರ್ 2.06ಮೀ. ಜಿಗಿದು ಎರಡನೇ ಸ್ಥಾನ ಪಡೆದರು. ಇದಕ್ಕೂ ಮುನ್ನ ಭಾರತಕ್ಕೆ ಭಾವಿಯಾ ಪಟೇಲ್ ಟೇಬಲ್ ಟೆನಿಸ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದು. ಈ ಮೂಲಕ ಭಾರತಕ್ಕೆ ಟೋಕಿಯೊ ಒಲಿಂಪಿಕ್ಸ್ ನ 5ನೇ ದಿನ 2 ಪದಕ ಬಂದಂತಾಯಿತು.
ಅಮೆರಿಕದ ಟೌನ್ ಸೆಂಡ್ ರಾಡ್ರಿಕ್ 2.15ಮೀ. ಎತ್ತರ ಜಿಗಿದು ಚಿನ್ನದ ಪದಕ ಗೆದ್ದುಕೊಂಡರೆ, ಅಮೆರಿಕದ ಮತ್ತೊಬ್ಬ ಸ್ಪರ್ಧಿ ವೈಸ್ ಡಲ್ಲಾಸ್ ಕೂಡ 2.06 ಮೀ. ಜಿಗಿದು ಕಂಚಿನ ಪದಕ ಗಳಿಸಿದರು.
ನಿಶಾದ್ ಮೊದಲ ಪ್ರಯತ್ನದಲ್ಲಿ 2.06 ಮೀ. ಜಿಗಿದು ಏಷ್ಯನ್ ಹಾಗೂ ವೈಯಕ್ತಿಕ ಸಾಧನೆ ಎರಡೂ ಮಾಡಿ ಬೆಳ್ಳಿ ಪದಕ ಖಚಿತಪಡಿಸಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಆಲ್ ರೌಂಡರ್ ರವೀಂದ್ರ ಜಡೇಜಾಗೆ ಗಾಯ: ಆಸ್ಪತ್ರೆಗೆ ತೆರಳಿದ ಕ್ರಿಕೆಟಿಗ