ಭಾರತದ ಸುಮಿತ್ ಅಂಟಿ
ಲ್ ಜಾವೆಲಿನ್ ಎಸೆತದಲ್ಲಿ ವಿಶ್ವದಾಖಲೆ ನಿರ್ಮಿಸುವ ಮೂಲಕ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಸೋಮವಾರ ನಡೆದ ಪುರುಷರ ಎಫ್ 64 ವಿಭಾಗದಲ್ಲಿ ಸುಮಿತ್ ಅಂಟಿಲ್ 68.55ಮೀ. ದೂರ ದಾಖಲಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ವಿಶೇಷ ಅಂದರೆ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಸುಮಿತ್ ಒಂದಲ್ಲ, ಎರಡಲ್ಲ, 3 ಬಾರಿ ವಿಶ್ವದಾಖಲೆ ಬರೆದು ಇತಿಹಾಸ ನಿರ್ಮಿಸಿದ್ದಾರೆ.
ಸುಮಿತ್ ಮೊದಲ ಪ್ರಯತ್ನದಲ್ಲೇ 66.95ಮೀ. ದೂರ ಎಸೆದು ವಿಶ್ವದಾಖಲೆ ಬರೆದರು. ಎರಡನೇ ಪ್ರಯತ್ನದಲ್ಲಿ ಅಷ್ಟೇ ದೂರ ದಾಖಲಿಸಿ ತಮ್ಮದೇ ವಿಶ್ವದಾಖಲೆ ಸರಿಗಟ್ಟಿದರು. 5ನೇ ಪ್ರಯತ್ನದಲ್ಲಿ 66.55 ಮೀ. ದೂರದೊಂದಿಗೆ ಮತ್ತೊಮ್ಮೆ ವಿಶ್ವದಾಖಲೆ ಬರೆದರು.
ಭಾರತದ ಮತ್ತೊಬ್ಬ ಸ್ಪರ್ಧಿ ಸಂದೀಪ್ ಚೌಧರಿ 62.20ಮೀ. ನೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದು ಕೂದಲೆಳೆ ಅಂತರದಲ್ಲಿ ಕಂಚಿನ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದರು. ಆಸ್ಟ್ರೇಲಿಯಾದ ಮೈಕಲ್ ಬುರಿಯನ್ (66.29ಮೀ.) ಬೆಳ್ಳಿ ಪದಕ ಗೆದ್ದರೆ, ಶ್ರೀಲಂಕಾದ ದುಲಾನ್ ಕುಡಿತುವಾಕು ಕಂಚಿನ ಪದಕಕ್ಕೆ ತೃಪ್ತರಾದರು.