Select Your Language

Notifications

webdunia
webdunia
webdunia
webdunia

ಕೆನಡಿಯನ್ ಓಪನ್: ಬೋಪಣ್ಣ ಜೋಡಿ ಕ್ವಾರ್ಟರ್ ಫೈನಲ್ ಗೆ

Canadian Open
bengaluru , ಗುರುವಾರ, 12 ಆಗಸ್ಟ್ 2021 (14:13 IST)
ಭಾರತದ ರೋಹನ್ ಬೋಪಣ್ಣ ಮತ್ತು ಕ್ರೊವೇಶಿಯಾದ ಇವಾನ್ ಡೊಡಿಗ್ ಜೋಡಿ ಕೆನಡಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಗುರುವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಪಂದ್ಯದಲ್ಲಿ 8ನೇ ಶ್ರೇಯಾಂಕಿತ ಜೋಡಿಯಾದ ಬೋಪಣ್ಣ ಮತ್ತು ಇವಾನ್ ಜೋಡಿ 6-4, 6-3 ನೇರ ಸೆಟ್ ಗಳಿಂದ ಮೆಕ್ಸಿಕೊದ ಸಿಮೊನ್ ಬೊಲೆಲಿ ಮತ್ತು ಮೆಕ್ಸಿಮೊ ಗುನ್ಜಾಲೆಜ್ ಜೋಡಿಯನ್ನು ಮಣಿಸಿತು.
ಇದಕ್ಕೂ ಮುನ್ನ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಬೋಪಣ್ಣ ಜೋಡಿ ಇಟಲಿಯಾದ ಫ್ಯಾಬಿಯೊ ಫೊಗಿನಿನಿ ಮತ್ತು ಲೆರ್ನೊಡೊ ಸೊನೆಗೊ ಅವರನ್ನು ಸೋಲಿಸಿತ್ತು. ಇದೀಗ ಮುಂದಿನ ಸುತ್ತಿನಲ್ಲಿ 8ನೇ ಶ್ರೇಯಾಂಕಿ ರಾಜೀವ್ ರಾಮ್ ಮತ್ತು ಜೋಯ್ ಸಲಿಸ್ಬರಿ ಜೋಡಿಯನ್ನು ಎದುರಿಸುವ ಸಾಧ್ಯತೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಯಾಂಕ್ ಅಗರ್ವಾಲ್ ಚೇತರಿಕೆ: ಇಂದಿನ ಪಂದ್ಯಕ್ಕೆ ಲಭ್ಯ?