Select Your Language

Notifications

webdunia
webdunia
webdunia
webdunia

ವಿಂಬಲ್ಡನ್ ಗೆದ್ದ ಬಳಿಕ ಪುಟಾಣಿ ಅಭಿಮಾನಿಗೆ ಜೊಕೋವಿಕ್ ಗಿಫ್ಟ್

ವಿಂಬಲ್ಡನ್ ಗೆದ್ದ ಬಳಿಕ ಪುಟಾಣಿ ಅಭಿಮಾನಿಗೆ ಜೊಕೋವಿಕ್ ಗಿಫ್ಟ್
ಲಂಡನ್ , ಸೋಮವಾರ, 12 ಜುಲೈ 2021 (11:02 IST)
ಲಂಡನ್: ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಫೈನಲ್ಸ್ ಪಂದ್ಯ ಗೆದ್ದ ಬಳಿಕ ಖ್ಯಾತ ಟೆನಿಸಿಗ ನೊವಾಕ್ ಜೊಕೋವಿಕ್ ತಮಗೆ ಮೈದಾನದಲ್ಲಿ ಚಿಯರ್ ಮಾಡಿದ ಪುಟಾಣಿ ಅಭಿಮಾನಿಗೆ ಉಡುಗೊರೆಯೊಂದನ್ನು ನೀಡಿದ್ದಾರೆ.
Photo Courtesy: Google


ಇದು ಜೊಕೋವಿಕ್ ರ 20 ನೇ ಗ್ರಾಂಡ್ ಸ್ಲಾಮ್ ಕಿರೀಟವಾಗಿದ್ದು, ವಿಂಬಲ್ಡನ್ ನಲ್ಲಿ ಮೂರನೇ ಗೆಲುವಾಗಿದೆ. ಈ ಐತಿಹಾಸಿಕ ಗೆಲುವಿನ ಬಳಿಕ ಗ್ಯಾಲರಿಯಲ್ಲಿದ್ದ ಪುಟಾಣಿ ಅಭಿಮಾನಿ ಬಳಿಗೆ ತೆರಳಿದ ಜೊಕೋವಿಕ್ ತಾವು ಆಡಿದ ಟೆನಿಸ್ ರಾಕೆಟ್ ನ್ನು ಉಡುಗೊರೆಯಾಗಿ ನೀಡಿದ್ದಾರೆ.

ತಮ್ಮ ಬಗ್ಗೆ ಅಭಿಮಾನದಿಂದ ಬರೆದ ಪ್ಲೇ ಕಾರ್ಡ್ ಹಿಡಿದುಕೊಂಡು ನಿಂತಿದ್ದ ಪುಟಾಣಿ ಬಾಲಕಿ ಬಳಿ ತೆರಳಿದ ಜೊಕೋವಿಕ್ ಆಕೆಗೆ ರಾಕೆಟ್ ಉಡುಗೊರೆ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೈಲಿ ಇನ್ನೂ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ: ಸುರೇಶ್ ರೈನಾ