Publish Date: Mon, 26 Jul 2021 (11:59 IST)
Updated Date: Mon, 26 Jul 2021 (10:01 IST)
ಟೋಕಿಯೋ: ಮಹಿಳೆಯರ ಟೆನಿಸ್ ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪಾಲಿಗೆ ಇದೇ ಕೊನೆಯ ಒಲಿಂಪಿಕ್ ಆಗುವ ಸಾಧ್ಯತೆಯಿದೆ.
34 ವರ್ಷದ ಸಾನಿಯಾ ಈ ಬಾರಿಯ ಒಲಿಂಪಿಕ್ಸ್ ನಲ್ಲಿ 9 ನೇ ಶ್ರೇಯಾಂಕಿತೆ ಅಂಕಿತಾ ರೈನಾ ಜೊತೆ ಡಬಲ್ಸ್ ವಿಭಾಗದಲ್ಲಿ ಸ್ಪರ್ಧಿಸಿ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದಾರೆ. ಮುಂದಿನ ಒಲಿಂಪಿಕ್ಸ್ 2024 ರಲ್ಲಿ ನಡೆಯಲಿದ್ದು, ಅಲ್ಲಿಯವರೆಗೆ ಸಾನಿಯಾ ಆಡುವುದು ಅನುಮಾನ.
ಮಗುವಾದ ಮೇಲಂತೂ ಸಾನಿಯಾ ಟೆನಿಸ್ ಕಣಕ್ಕಿಳಿದಿದ್ದೇ ಅಪರೂಪ. ಹಾಗಿದ್ದರೂ ಕಳೆದ ವಿಂಬಲ್ಡನ್ ನಲ್ಲಿ ವಿದೇಶೀ ಜೊತೆಗಾತಿಯ ಜೊತೆ ಕಣಕ್ಕಿಳಿದಿದ್ದರು. ಇನ್ನು ಮೊದಲಿನಂತೆ ಆಡಲು ವಯಸ್ಸೂ ಸಾಥ್ ಕೊಡುತ್ತಿಲ್ಲ. ಹೀಗಾಗಿ ಇದು ಅವರ ಪಾಲಿಗೆ ಕೊನೆಯ ಒಲಿಂಪಿಕ್ಸ್ ಆಗಿರಬಹುದು.