Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ: ಕುತೂಹಲ ಘಟ್ಟಕದಲ್ಲಿ ಕರ್ನಾಟಕ- ಯುಪಿ ಪಂದ್ಯ

ranaji trophy karnataka UP ಉತ್ತರ ಪ್ರದೇಶ ರಣಜಿ ಟ್ರೋಫಿ ಕರ್ನಾಟಕ
bengaluru , ಮಂಗಳವಾರ, 7 ಜೂನ್ 2022 (21:41 IST)

ಬೌಲರ್ಗಳ ಮೇಲಾಟದಲ್ಲಿ ಉತ್ತರ ಪ್ರದೇಶದಲ್ಲಿ ಆಲೌಟಾಗಿಮಾಡಿ ಮಹತ್ವದ ಮುನ್ನಡೆ ಪಡೆದ ಕರ್ನಾಟಕ ತಂಡ ಎರಡನೇ ಇನಿಂಗ್ಸ್ನಲ್ಲಿ ಉತ್ತರ ಪ್ರದೇಶ ಬೌಲರ್ಗಳ ತಿರುಗೇಟಿಗೆ ತತ್ತರಿಸಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದೆ.

ಬೆಂಗಳೂರಿನ ಆಲೂರು ಮೈದಾನದಲ್ಲಿ ನಡೆಯುತ್ತಿರುವ ಕ್ವಾರ್ಟರ್ಫೈನಲ್ಪಂದ್ಯದ ೨ನೇ ದಿನವಾದ ಮಂಗಳವಾರ ಬೌಲರ್ಗಳ ಮೇಲಾಟದಲ್ಲಿ ಒಂದೇ ದಿನ 21 ವಿಕೆಟ್ಉರುಳಿದವು. 213 ರನ್ಗೆ 7 ವಿಕೆಟ್ಕಳೆದುಕೊಂಡು ಮೊದಲ ಇನಿಂಗ್ಸ್ಮುಂದುವರಿಸಿದ ಕರ್ನಾಟಕ 253 ರನ್ಗಳಿಗೆ ಆಲೌಟಾಯಿತು.

ಮೊದಲ ಇನಿಂಗ್ಸ್ಆರಂಭಿಸಿದ ಉತ್ತರ ಪ್ರದೇಶ 155 ರನ್ಗಳಿಗೆ ಪತನಗೊಂಡಿತು. 58 ರನ್ಗಳ ಮುನ್ನಡೆ ಪಡೆದ ಕರ್ನಾಟಕ ತಂಡ ದಿನದಾಂತ್ಯಕ್ಕೆ ಎರಡನೇ ಇನಿಂಗ್ಸ್ನಲ್ಲಿ 8 ವಿಕೆಟ್ಕಳೆದುಕೊಂಡು 100 ರನ್ಗಳಿಸಿದ್ದು, ಒಟ್ಟಾರೆ 198 ರನ್ಗಳ ಮಹತ್ವದ ಮುನ್ನಡೆ ಪಡೆದಿದೆ.

ಕರ್ನಾಟಕದ ಪರ ಮಯಾಂಕ್ಅಗರ್ವಾಲ್‌ 22 ರನ್ಗಳಿಸಿದರೆ, ಉತ್ತರ ಪ್ರದೇಶದ ಪರ ಸೌರಭ್ಕುಮಾರ್‌ 3 ವಿಕೆಟ್ಪಡೆದು ಮಿಂಚಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಕುಡಿದ ಮತ್ತಿನಲ್ಲಿ ನೆಹ್ರಾ-ಯಜುವೇಂದ್ರ ಚಾಹಲ್ ಸಂಭಾಷಣೆ ವೈರಲ್