15 ವರ್ಷದ ಬಾಲಕ ಕೃಷ್ಣ ಪಾಂಡೆ ಒಂದೇ ಓವರ್ ನಲ್ಲಿ ಸತತ 6 ಸಿಕ್ಸರ್ ಸಿಡಿಸಿ ಗಮನ ಸೆಳೆದ ಘಟನೆ ಪುದುಚೇರಿ ಟಿ-10 ಕ್ರಿಕೆಟ್ ಟೂರ್ನಿಯಲ್ಲಿ ನಡೆದಿದೆ.
ಒಂದೇ ಓವರ್ ನಲ್ಲಿ ಸತತ 6 ಸಿಕ್ಸರ್ ಸಿಡಿಸುವುದು ಸಾಮಾನ್ಯ ಸಂಗತಿ ಅಲ್ಲ. ಆದರೆ ಕೃಷ್ಣ ಪಾಂಡೆ ಈ ಸಾಧನೆ ಮಾಡುವ ಮೂಲಕ ಯುವರಾಜ್ ಸಿಂಗ್, ಕೀರನ್ ಪೊಲಾರ್ಡ್, ರವಿಶಾಸ್ತ್ರೀ ಅವರ ನೆನಪಿಸುವಂತೆ ಮಾಡಿದ್ದಾನೆ.
ಪೈಟ್ರಿಯೇಟ್ಸ್ ಮತ್ತು ರಾಯಲ್ಸ್ ನಡುವಣ ಪಂದ್ಯದಲ್ಲಿ ನಿತೀಶ್ ಕುಮಾರ್ ಅವರ ಎಸೆತದಲ್ಲಿ ಕೃಷ್ಣ ಪಾಂಡೆ ಸತತ 5 ಸಿಕ್ಸರ್ ಸಿಡಿಸಿದರು. 6ನೇ ಎಸೆತವನ್ನು ನಿತೀಶ್ ವೈಡ್ ಎಸೆದರು. ಆದರೆ ನಂತರದ ಎಸೆತವನ್ನೂ ಸಿಕ್ಸರ್ ಗೆ ಅಟ್ಟಿ ದಾಖಲೆ ಬರೆದರು.
ಪಾಂಡೆ ಅಂತಿಮವಾಗಿ 19 ಎಸೆತಗಳಲ್ಲಿ 83 ರನ್ ಸಿಡಿಸಿ ಔಟಾದರು. 158 ರನ್ ಬೆನ್ನಟ್ಟಿದ್ದ ಪೆಟ್ರಿಯಾಟ್ ತಂಡ ಪಾಂಡೆ ಔಟಾಗುತ್ತಿದ್ದಂತೆ ಕುಸಿತ ಕಂಡು 4 ರನ್ ಗಳಿಂದ ಸೋಲುಂಡಿತು. ಇದೇ ಪಂದ್ಯದಲ್ಲಿ ಧನಂಜಯ್ ಎಂಬ ಬೌಲರ್ ಹ್ಯಾಟ್ರಿಕ್ ಸಾಧನೆ ಕೂಡ ಮಾಡಿ ಗಮನ ಸೆಳೆದರು.
ಯುವರಾಜ್ ಸಿಂಗ್ 2017ರ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ನ ಸ್ಟುವರ್ಟ್ ಬ್ರಾಡ್ ಓವರ್ ನಲ್ಲಿ ಸತತ 6 ಸಿಕ್ಸರ್ ಸಿಡಿಸಿದ್ದರು. ಇದಕ್ಕೂ ಮುನ್ನ ಹರ್ಷಲ್ ಗಿಲ್ಸ್ ಮೊದಲ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸತತ 6 ಸಿಕ್ಸರ್ ಸಿಡಿಸಿದ್ದರು.