Select Your Language

Notifications

webdunia
webdunia
webdunia
webdunia

ವೈಯಕ್ತಿಕ ಕಾರಣ ನೀಡಿ ಒಲಿಂಪಿಕ್ಸ್ ತರಬೇತಿ ಬಿಟ್ಟು ದಿಡೀರ್ ಲಂಡನ್ ಗೆ ಹಾರಿದ ಪಿವಿ ಸಿಂಧು

ವೈಯಕ್ತಿಕ ಕಾರಣ ನೀಡಿ ಒಲಿಂಪಿಕ್ಸ್ ತರಬೇತಿ ಬಿಟ್ಟು ದಿಡೀರ್ ಲಂಡನ್ ಗೆ ಹಾರಿದ ಪಿವಿ ಸಿಂಧು
ಹೈದರಾಬಾದ್ , ಮಂಗಳವಾರ, 20 ಅಕ್ಟೋಬರ್ 2020 (09:42 IST)
ಹೈದರಾಬಾದ್: ಭಾರತದ ಖ್ಯಾತ ಮಹಿಳಾ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಇದ್ದಕ್ಕಿದ್ದಂತೆ ಒಲಿಂಪಿಕ್ಸ್ ತಯಾರಿ ಶಿಬಿರವನ್ನು ಬಿಟ್ಟು ಲಂಡನ್ ಗೆ ಹಾರಿದ್ದಾರೆ. ಇದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.


ಒಲಿಂಪಿಕ್ಸ್ ಶಿಬಿರವನ್ನು ಅರ್ಧದಲ್ಲೇ ಕೈಬಿಟ್ಟು ವೈಯಕ್ತಿಕ ಕಾರಣ ನೀಡಿ ಸಿಂಧು ಲಂಡನ್ ಗೆ ಹಾರಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ತಾವು ಫಿಟ್ನೆಸ್ ತರಬೇತಿ ಪಡೆಯಲು ಲಂಡನ್ ಗೆ ಬಂದಿಳಿದಿರುವುದಾಗಿ ಸಿಂಧು ಬರೆದುಕೊಂಡಿದ್ದಾರೆ. ಏಷ್ಯಾ ಟೂರ್ ಗೆ ಇನ್ನು ಮೂರು ತಿಂಗಳು ಬಾಕಿಯಿದ್ದು, ಅದಕ್ಕೂ ಮೊದಲು ದೈಹಿಕ ಸಾಮರ್ಥ್ಯ ವೃದ್ಧಿಸಿಕೊಳ್ಳುವುದು ಮುಖ್ಯ ಎಂದಿದ್ದಾರೆ. ಇನ್ನು, ಮೂರು ವಾರಗಳ ಕಾಲ ಅವರು ಲಂಡನ್ ನಲ್ಲಿ ಕಳೆಯಲಿದ್ದಾರೆ. ಆದರೆ ಆಂಗ್ಲ ಮಾಧ‍್ಯಮವೊಂದರ ಪ್ರಕಾರ ಕೌಟುಂಬಿಕ ಸಮಸ್ಯೆಯೂ ಇದಕ್ಕೆ ಕಾರಣ ಎಂದಿದೆ. ಆದರೆ ಈ ಬಗ್ಗೆ ಸ್ಪಷ್ಟತೆ ಇಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: 200 ನೇ ಪಂದ್ಯವಾಡಿದ ಧೋನಿ, ವಿಶ್ ಮಾಡಿದ ಸುರೇಶ್ ರೈನಾ