Select Your Language

Notifications

webdunia
webdunia
webdunia
webdunia

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಇಂದು ಭಾರತೀಯ ಪಂದ್ಯಗಳ ವಿವರ

PV Sindhu

Krishnaveni K

ಪ್ಯಾರಿಸ್ , ಶನಿವಾರ, 27 ಜುಲೈ 2024 (10:06 IST)
Photo Credit: Instagram
ಪ್ಯಾರಿಸ್: 33 ನೇ ಒಲಿಂಪಿಕ್ಸ್ ಗೆ ನಿನ್ನೆ ತಡರಾತ್ರಿ ಚಾಲನೆ ಸಿಕ್ಕಿದ್ದು, ಇಂದು ಭಾರತದ ಪ್ರಮುಖ ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಕಣದಲ್ಲಿದ್ದಾರೆ. ಇಂದು ಯಾವೆಲ್ಲಾ ಭಾರತೀಯ ಸ್ಪರ್ಧಿಗಳ ವಿವರ ಇಲ್ಲಿದೆ.

 ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನದಿಯೊಂದರ ಮೇಲೆ ಉದ್ಘಾಟನಾ ಸಮಾರಂಭ ನಡೆದಿದೆ. ವರ್ಣರಂಜಿತ ಕಾರ್ಯಕ್ರಮದಲ್ಲಿ ಪ್ಯಾರಿಸ್ ನ ಸಾಂಸ್ಕೃತಿಕ ಕಲಾ ವೈಭವವನ್ನು ಪ್ರದರ್ಶಿಸಲಾಯಿತು. ಎಲ್ಲಾ ದೇಶಗಳ ಕ್ರೀಡಾಪಟುಗಳು ಪಥಸಂಚಲನದಲ್ಲಿ ಭಾಗಿಯಾದರು. ಭಾರತದ ನಿಯೋಗವನ್ನು ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮುನ್ನಡೆಸಿದರು. ಟಿಟಿ ತಾರೆ ಶರತ್ ಕಮಲ್ ಸೇರಿದಂತೆ ಕ್ರೀಡಾಪಟುಗಳು ಭಾರತೀಯ ಧ್ವಜ ಹಿಡಿದು ಮುನ್ನಡೆದರು.

ಇಂದಿನ ಭಾರತದ ಪಂದ್ಯಗಳ ವಿವರ ಇಲ್ಲಿದೆ:
ಬ್ಯಾಡ್ಮಿಂಟನ್: ಪುರುಷರ ಸಿಂಗಲ್ಸ್, ಪ್ರಣಯ್, ಲಕ್ಷ ಸೇನ್
ಮಹಿಳೆಯರ ಸಿಂಗಲ್ಸ್: ಪಿವಿ ಸಿಂಧು
ಡಬಲ್ಸ್: ಸಾಯಿರಾಜ್-ಚಿರಾಗ್ ಶೆಟ್ಟಿ
ಮಹಿಳಾ ಡಬಲ್ಸ್: ತನಿಷಾ ಕ್ರಾಸ್ಟೊ-ಅಶ್ವಿನಿ ಪೊನ್ನಪ್ಪ
ಸಮಯ ಮಧ್ಯಾಹ್ನ 12.30 ಕ್ಕೆ
ರೋಯಿಂಗ್: ಪುರುಷರ ಸಿಂಗಲ್ಸ್ ಸ್ಕಲ್ಸ್ ಹೀಟ್ಸ್: ಬಲರಾ್ ಪನ್ವರ್ ಸಮಯ ಮಧ್ಯಾಹ್ನ 12.30
ಶೂಟಿಂಗ್: 10 ಮೀ. ಏರ್ ಪಿಸ್ತೂಲ್ ಮಿಶ್ರತಂಡ
ಸಮಯ ಮಧ್ಯಾಹ್ನ 12.30 (ಅರ್ಹತಾ ಸುತ್ತು) ಮತ್ತು ಮಧ್ಯಾಹ್ನ 2.00 (ಪದಕ ಸುತ್ತು)
ಟೆನಿಸ್: ಪುರುಷರ ಸಿಂಗಲ್ಸ್ ಸಮಿತ್ ನಾಗಲ್
ಪುರುಷರ ಡಬಲ್ಸ್ ರೋಹನ್ ಬೋಪಣ್ಣ-ಬಾಲಾಜಿ ಮಧ್ಯಾಹ್ನ 3.30 ಕ್ಕೆ
ಟೇಬಲ್ ಟೆನಿಸ್
ಪುರುಷರ ಸಿಂಗಲ್ಸ್ ಅಚಂತ ಶರತ್, ಹರ್ಮಿತ್ ದೇಸಾಯಿ
ಸಮಯ: ಸಂಜೆ 6.30 ಕ್ಕೆ
ಬಾಕ್ಸಿಂಗ್: ಮಹಿಳೆಯರ 54 ಕೆ.ಜಿ. ಪ್ರೀತಿ ಪವಾರ್
ಸಮಯ: ಸಂಜೆ 7 ಗಂಟೆ
ಪುರುಷರ ಹಾಕಿ
ಭಾರತ-ನ್ಯೂಜಿಲೆಂಡ್
ಸಮಯ ರಾತ್ರಿ 9.00

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ನಾಯಕ, ಹೊಸ ಕೋಚ್ ನೇತೃತ್ವದಲ್ಲಿ ಶ್ರೀಲಂಕಾ ವಿರುದ್ಧ ಟಿ20 ಸರಣಿಗೆ ಸಜ್ಜಾದ ಟೀಂ ಇಂಡಿಯಾ