ಫ್ಯಾರಿಸ್: ಇಂದು ಅದ್ಧೂರಿ ಚಾಲನೆಗೆ ವೇದಿಕೆ ಸಜ್ಜಾಗಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಮಳೆರಾಯ ಅಡ್ಡಿಯಾಗುವ ಮುನ್ಸೂಚನೆಯಿದೆ.
ಶೇ 70ರಿಂದ 80ರಷ್ಟು ಮಳೆಯಾಗುವ ಮುನ್ಸೂಚನೆಯಿದೆ ಎಂದು ಹವಾಮಾನ ಇಲಾಖೆ ನೀಡಿದೆ.
ಫ್ರೆಂಚ್ ಹವಾಮಾನ ಚಾನೆಲ್‌ಗಳಲ್ಲಿ ಉದ್ಘಾಟನಾ ಸಮಾರಂಭ ಪ್ರಾರಂಭವಾಗಲು ಕೇವಲ 30 ನಿಮಿಷಗಳ ಮೊದಲು ಸುಮಾರು 7 ಗಂಟೆಗೆ ಮಳೆ ಬೀಳುವ ಮುನ್ಸೂಚನೆ ನೀಡಿವೆ.
ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭಕ್ಕೆ ಸೆನ್ ನದಿಯ ತಟದಲ್ಲಿ ಅದ್ದೂರಿ ವೇದಿಕೆ ಸಜ್ಜಾಗಿದೆ. ಅಲ್ಲಿ ಸುಮಾರು 10,000 ಕ್ರೀಡಾಪಟುಗಳು ಸೇರಿದಂತೆ 3 ಲಕ್ಷ ಮಂದಿ ಸಾಕ್ಷಿಯಾಗುವ ನಿರೀಕ್ಷೆಯಿದೆ.
ಇನ್ನೂ ಕೆಲವು ವರದಿಗಳಲ್ಲಿ ಒಲಿಂಪಿಕ್ಸ್ ಉದ್ಘಾಟನ ಸಮಾರಂಭಕ್ಕೆ ಪ್ರವಾಹ ಭೀತಿ ಎದುರಾಗುವ ಸಾಧ್ಯತೆಯಿದೆ ಎಂದು ಃಏಳಿದೆ.
100 ಕ್ಕೂ ಹೆಚ್ಚು ದೋಣಿಗಳಲ್ಲಿ ಸುಮಾರು 10,500 ಕ್ರೀಡಾಪಟುಗಳು ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ. ಅನೇಕ ಹೆಸರಾಂತ ಕಲಾವಿದರು ಸಹ ಪ್ರದರ್ಶನ ನೀಡಲು ನಿರ್ಧರಿಸಿದ್ದಾರೆ.