Select Your Language

Notifications

webdunia
webdunia
webdunia
webdunia

Paris Olympics 2024: 33 ನೇ ಒಲಿಂಪಿಕ್ಸ್ ಉದ್ಘಾಟನಾ ಪಂದ್ಯದ ವಿಶೇಷತೆ, ಸಮಯ ವಿವರ ಇಲ್ಲಿದೆ

Olympics

Krishnaveni K

ಪ್ಯಾರಿಸ್ , ಶುಕ್ರವಾರ, 26 ಜುಲೈ 2024 (11:33 IST)
ಪ್ಯಾರಿಸ್: 33 ನೇ ಒಲಿಂಪಿಕ್ಸ್ ಇಂದು ಅಧಿಕೃತವಾಗಿ ಚಾಲನೆ ಸಿಗುತ್ತಿದೆ. ಪ್ಯಾರಿಸ್ ಒಲಿಂಪಿಕ್ಸ್ ರ ಉದ್ಘಾಟನಾ ಸಮಾರಂಭ ಇಂದು ಸೆನ್ ನದಿಯ ಮೇಲೆ ಅದ್ಧೂರಿಯಾಗಿ ನಡೆಯಲಿದೆ. ಭಾರೀಯ ಕಾಲಮಾನ ಪ್ರಕಾರ ರಾತ್ರಿ 11.30 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ.

ಜಗತ್ತಿನ ಕ್ರೀಡಾಭಿಮಾನಿಗಳ ಕಣ್ಣೆಲ್ಲಾ ಈಗ ಪ್ಯಾರಿಸ್ ಒಲಿಂಪಿಕ್ಸ್ ನತ್ತ ನೆಟ್ಟಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಒಲಿಂಪಿಕ್ಸ್ ಉದ್ಘಾಟನಾ ಪಂದ್ಯ ನದಿಯ ಮೇಲೆ ನಡೆಯುತ್ತಿದೆ. ಇಂದಿನಿಂದ ಆರಂಭವಾಗುವ ಒಲಿಂಪಿಕ್ಸ್ ಕ್ರೀಡಾಕೂಟ ಆಗಸ್ಟ್ 11 ರವರೆಗೆ ನಡೆಯಲಿದೆ.

ಉದ್ಘಾಟನಾ ಸಮಾರಂಭದಲ್ಲಿ ಎಲ್ಲಾ ದೇಶಗಳ ಕ್ರೀಡಾಪಟುಗಳ ನಿಯೋಗ ಪಥಸಂಚಲನ ನಡೆಸಲಿದೆ. ಭಾರತದ ಪಥಸಂಚಲನದ ನೇತೃತ್ವವನ್ನು ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ವಹಿಸಲಿದ್ದಾರೆ. ಭಾರತ ಈ ಬಾರಿ 117 ಸ್ಪರ್ಧಿಗಳನ್ನು ಒಲಿಂಪಿಕ್ಸ್ ಗೆ ಕಳುಹಿಸಿದೆ. ಬ್ಯಾಡ್ಮಿಂಟನ್, ಹಾಕಿ, ಈಜು, ಶೂಟಿಂಗ್, ಆರ್ಚರಿ, ಕುಸ್ತಿ, ಬಾಕ್ಸಿಂಗ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಭಾರತದ ಕ್ರೀಡಾಪಟುಗಳು ಸ್ಪರ್ಧೆ ನಡೆಸಲಿದ್ದಾರೆ. ಕರ್ನಾಟಕದಿಂದ 9 ಸ್ಪರ್ಧಿಗಳು ಕಣದಲ್ಲಿದ್ದಾರೆ.

1924 ರಲ್ಲಿ ಆರಂಭವಾದ ಒಲಿಂಪಿಕ್ಸ್ ಕ್ರೀಡಾಕೂಟ ಈಗ ಶತಮಾನದ ಹೊಸ್ತಿಲಲ್ಲಿದೆ. ಹೀಗಾಗಿ ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್ ವಿಶೇಷವಾಗಿದೆ. ಪ್ಯಾರಿಸ್ ಒಲಿಂಪಿಕ್ಸ್ ಆಯೋಜಿಸಲು 68.54 ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. 1011 ಚಿನ್ನ, ಬೆಳ್ಳಿ, ಕಂಚು ಪದಕಗಳನ್ನು ಸ್ಪರ್ಧಿಗಳಿಗೆ ನೀಡಲಾಗುತ್ತದೆ.  ಒಲಿಂಪಿಕ್ಸ್ ಪಂದ್ಯಾವಳಿಗಳ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ನೇರಪ್ರಸಾರ ಮಾಡಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

Women's Asia Cup: ಮಹಿಳೆಯರ ಏಷ್ಯಾ ಕಪ್ ಟೂರ್ನಿ ಸೆಮಿಫೈನಲ್ ನಲ್ಲಿ ಇಂದು ಭಾರತ ವನಿತೆಯರಿಗೆ ಬಾಂಗ್ಲಾದೇಶ ಸವಾಲು