Select Your Language

Notifications

webdunia
webdunia
webdunia
webdunia

ತೈವಾನ್ ಓಪನ್ 2024 ಕ್ರೀಡಾಕೂಟ: ಜಾವೆಲಿನ್‌ ಥ್ರೋನಲ್ಲಿ ಚಿನ್ನ ಗೆದ್ದ ಡಿಪಿ ಮನು

ತೈವಾನ್ ಓಪನ್ 2024 ಕ್ರೀಡಾಕೂಟ: ಜಾವೆಲಿನ್‌ ಥ್ರೋನಲ್ಲಿ ಚಿನ್ನ ಗೆದ್ದ ಡಿಪಿ ಮನು

sampriya

ಬೆಂಗಳೂರು , ಭಾನುವಾರ, 2 ಜೂನ್ 2024 (17:04 IST)
Photo By X
ಬೆಂಗಳೂರು: ತೈವಾನ್ ಓಪನ್ 2024 ಕ್ರೀಡಾಕೂಟದಲ್ಲಿ ಕನ್ನಡಿಗ ಡಿಪಿ ಮನು ಅವರು ಜಾವೆಲಿನ್‌ ಥ್ರೋನಲ್ಲಿ ಚಿನ್ನ ಗೆಲ್ಲುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.

ತೈವಾನ್ ಓಪನ್​-2024ರಲ್ಲಿ ಭಾರತ ಹಾಗೂ ಕರ್ನಾಟಕದ ಅಥ್ಲೀಟ್​ ಡಿಪಿ ಮನು ಅವರು ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಫೈನಲ್‌ನಲ್ಲಿ  81.58 ಮೀ ದೂರ ಜಾವೆಲಿನ್ ಎಸೆಯುವ ಮೂಲಕ ಅಗ್ರಸ್ಥಾನ ಪಡೆದು ಚಿನ್ನದ ಪದಕವನ್ನು ಪಡೆದಿದ್ದಾರೆ.

91.36 ಮೀಟರ್‌ ಜಾವೆಲಿನ್ ಥ್ರೋ ಎಸೆಯುವ ಮೂಲಕ ಏಷ್ಯನ್ ದಾಖಲೆಯನ್ನು ಹೊಂದಿರುವ ತೈವಾನ್​​ನ ಚೆಂಗ್ ಚಾವೊ-ತ್ಸುನ್ ಅವರು, ಈ ಸ್ಪರ್ಧೆಯಲ್ಲಿ 76.21 ಮೀಟರ್‌ ಎಸೆದು ಬೆಳ್ಳಿ ಗೆದ್ದಿದ್ದಾರೆ.

ಈ ಹಿಂದೆ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದ ಡಿಪಿ ಮನು ಕೂದಲೆಳೆ ಅಂತರದಲ್ಲಿ ಭಾರತದ ನೀರಜ್ ಚೋಪ್ರಾ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ಭಾಜನರಾಗಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಗೆಳತಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಲ್‌ ರೌಂಡರ್‌ ವೆಂಕಟೇಶ್‌ ಅಯ್ಯರ್‌