Select Your Language

Notifications

webdunia
webdunia
webdunia
webdunia

ಸೆಲೆಬ್ರಿಟಿ ಕ್ರಿಕೆಟ್ ಲೀಗ್: ಕಿರೀಟದ ಹೊಸ್ತಿಲಲ್ಲಿ 'ಕಿಚ್ಚ' ಸಾರಥ್ಯದ ಬುಲ್ಡೋಜರ್ಸ್‌

Karnataka Buldozers

Sampriya

ತಿರುವಣಂತಪುರಂ , ಭಾನುವಾರ, 17 ಮಾರ್ಚ್ 2024 (12:29 IST)
Photo Courtesy X
ಕೇರಳ: ಇಂದು ಕರ್ನಾಟಕದ ಕ್ರಿಕೆಟ್ ಪ್ರಿಯರಿಗೆ ಡಬಲ್ ಧಮಾಕ.  ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಹಿಳಾ ಪ್ರೀಮಿಯರ್ ಫೈನಲ್‌ನಲ್ಲಿ ಆರ್‌ಸಿಬಿ ತಂಡ ಹಾಗೂ ಕೇರಳದ ರಾಜಧಾನಿ ತಿರುವಣಂತಪುರಂನಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಫೈನಲ್‌ ಕರ್ನಾಟಕ ಬುಲ್ಡೋಜರ್ಸ್‌ ತಂಡ ಪ್ರಶಸ್ತಿಯ ಸನಿಹದಲ್ಲಿದೆ.
 
ನಿನ್ನೆ ತಿರುವನಂತಪುರದ ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ನಡೆದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಬೆಂಗಾಲ್ ಟೈಗರ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.
 
ಈ ಮೂಲಕ ಇಂದು ಮತ್ತೇ ಬೆಂಗಾಲ್ ಟೈಗರ್ಸ್‌ ಹಾಗೂ ಕರ್ನಾಟಕ ಬುಲ್ಡೋಜರ್ಸ್ ಮಧ್ಯೆ ಫೈನಲ್ ಪಂದ್ಯಾಟ ತಿರುವಣಂಪುರಂನಲ್ಲಿ ಸಂಜೆ 6.30ಕ್ಕೆ ಆರಂಭಗೊಳ್ಳಲಿದೆ.  
 
 ಕರ್ನಾಟಕ ಬುಲ್ಡೋಜರ್ಸ್, ಬೆಂಗಾಲ್ ಟೈಗರ್ಸ್, ಮುಂಬೈ ಹೀರೋಸ್ ಮತ್ತು ಚೆನ್ನೈ ರೈನೋಸ್ ತಂಡಗಳು ಸಿಸಿಎಲ್‌ ಸೀಸನ್ 10 ರ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿತ್ತು. ಪ್ಲೇಆಫ್‌ಗಳು ಕ್ವಾಲಿಫೈಯರ್ 1, ಎಲಿಮಿನೇಟರ್, ಕ್ವಾಲಿಫೈಯರ್ 2 ಮತ್ತು ಫೈನಲ್ ಸೇರಿದಂತೆ ನಾಲ್ಕು ಪಂದ್ಯಗಳನ್ನು ಒಳಗೊಂಡಿತ್ತು.
 
ಕರ್ನಾಟಕ ಬುಲ್ಡೋಜರ್ಸ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಬೆಂಗಾಲ್ ಟೈಗರ್ಸ್ ಅನ್ನು ಸೋಲಿಸಿದ ನಂತರ ಸಿಸಿಎಲ್‌ 2024 ಫೈನಲ್‌ಗೆ ನೇರವಾಗಿ ಅರ್ಹತೆ ಗಳಿಸಿತು. ಮತ್ತೊಂದೆಡೆ, ಬೆಂಗಾಲ್ ಟೈಗರ್ಸ್ ಎರಡನೇ ಕ್ವಾಲಿಫೈಯರ್‌ನಲ್ಲಿ ಮುಂಬೈ ಹೀರೋಸ್ ಅನ್ನು ಸೋಲಿಸಿ ಫೈನಲ್‌ಗೆ ತಲುಪಿತು. ‌
 

Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಲ್ಯುಪಿಎಲ್‌: ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿ ಆರ್‌ಸಿಬಿ, 'ಕಫ್ ನಮ್ಮದೇ' ಎಂದಾ ಫ್ಯಾನ್ಸ್‌