Select Your Language

Notifications

webdunia
webdunia
webdunia
webdunia

Women’s Asia cup semifinal: ಬಾಂಗ್ಲಾದೇಶ ವನಿತೆಯರ ಮಣಿಸಿ ಫೈನಲ್ ಗೆ ಲಗ್ಗೆಯಿಟ್ಟ ಭಾರತ ವನಿತೆಯರು

Smriti Mandhana-Shafali Verma

Krishnaveni K

ದಂಬುಲಾ , ಶುಕ್ರವಾರ, 26 ಜುಲೈ 2024 (16:30 IST)
Photo Credit: BCCI
ದಂಬುಲಾ: ಮಹಿಳೆಯರ ಏಷ್ಯಾ ಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 10 ವಿಕೆಟ್ ಗಳಿಂದ ಮಣಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ ಫೈನಲ್ ಗೇರಿದೆ.

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಲಷ್ಟೇ ಶಕ್ತವಾಯಿತು. ರೇಣುಕಾ ಸಿಂಗ್, ರಾಧಾ ಯಾದವ್ ದಾಳಿಗೆ ತತ್ತರಿಸಿದ ಬಾಂಗ್ಲಾ ರನ್ ಗಳಿಸಲು ತಿಣುಕಾಡಿತು. ಬಾಂಗ್ಲಾ ಪರ ನಾಯಕಿ ನಿಗರ್ ಸುಲ್ತಾನ 32 ರನ್ ಗಲಿಸಿದರೆ ಶೊಮಾ ಅಕ್ತೆರ್ 19 ರನ್ ಗಳಿಸಿದರು.

ಈ ಸುಲಭ ಮೊತ್ತ ಬೆನ್ನತ್ತಿದ ಭಾರತಕ್ಕೆ ಭಾರತದ ಆರಂಭಿಕ ಜೋಡಿ ಸ್ಮೃತಿ ಮಂಧಾನಾ ಮತ್ತು ಶಫಾಲಿ ವರ್ಮ ಭರ್ಜರಿ ಆರಂಭ ನೀಡಿದರು. ಬಾಂಗ್ಲಾ ಬೌಲರ್ ಗಳನ್ನು ಬೆಂಡೆತ್ತಿದ ಈ ಜೋಡಿ ಮುರಿಯದ ಮೊದಲ ವಿಕೆಟ್ ಗೆ 83 ರನ್ ಗಳ ಜೊತೆಯಾಟವಾಡಿತು. ಸ್ಮೃತಿ 39 ಎಸೆತಗಳಿಂದ 55 ರನ್ ಗಳಿಸಿದರೆ ಶಫಾಲಿ 28 ಎಸೆತಗಳಿಂದ 26 ರನ್ ಗಳಿಸಿದರು. ಕೊನೆಯಲ್ಲಿ ಬೌಂಡರಿ ಮೂಲಕ ಸ್ಮೃತಿ ಭಾರತವನ್ನು ಫೈನಲ್ ಗೆ ತಲುಪಿಸಿದರು.

ಇದರೊಂದಿಗೆ ಭಾರತ 9 ಏಷ್ಯಾ ಕಪ್ ಗಳ ಪೈಕಿ ಒಂಭತ್ತನೇ ಬಾರಿಗೆ ಫೈನಲ್ ಗೇರಿದ ಸಾಧನೆ ಮಾಡಿತು. ಈ ಪೈಕಿ ಏಳು ಬಾರಿ ಭಾರತ ಇದುವರೆಗೆ ಚಾಂಪಿಯನ್ ಆಗಿದೆ. ಈ ಬಾರಿಯೂ ಭಾರತವೇ ಗೆಲ್ಲುವ ಫೇವರಿಟ್ ತಂಡವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Paris Olympics 2024: 33 ನೇ ಒಲಿಂಪಿಕ್ಸ್ ಉದ್ಘಾಟನಾ ಪಂದ್ಯದ ವಿಶೇಷತೆ, ಸಮಯ ವಿವರ ಇಲ್ಲಿದೆ