Select Your Language

Notifications

webdunia
webdunia
webdunia
webdunia

ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ಸೋಲಲು ಸೂಚಿಸಿದ್ದ ಕೋಚ್: ಮಣಿಕಾ ಬಾತ್ರಾ ಗಂಭೀರ ಆರೋಪ

Manika Batra
bengaluru , ಶನಿವಾರ, 4 ಸೆಪ್ಟಂಬರ್ 2021 (15:40 IST)
ಟೋಕಿಯೊ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ಸೋಲುವಂತೆ ಕೋಚ್ ಸೌಮ್ಯದೀಪ್ ರಾಯ್ ಸೂಚಿಸಿದ್ದರು ಎಂದು ಭಾರತದ ಟೇಬಲ್ ಟೆನಿಸ್ ತಾರೆ ಮಣಿಕ್ ಬಾತ್ರಾ ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ನಲ್ಲೂ ಮ್ಯಾಚ್ ಫಿಕ್ಸಿಂಗ್ ಭೂತ ಕಾಣಿಸಿಕೊಂಡಿದೆ.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕೋಚ್ ಸೌಮ್ಯದೀಪ್ ರಾಯ್ ಅವರ ಸಹಾಯ ಪಡೆಯದೇ ಸ್ಪರ್ಧಿಸಿದ್ದಕ್ಕಾಗಿ ಕಾರಣ ನೀಡುವಂತೆ ಟೇಬಲ್ ಟೆನಿಸ್ ಸಂಸ್ಥೆ ನೀಡಿದ ಉತ್ತರದಲ್ಲಿ ಈ ಆಘಾತಕಾ
ರಿ ಅಂಶವನ್ನು ಬಹಿರಂಗಪಡಿಸಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ಸಿಂಗಲ್ಸ್ ವಿಭಾಗದಲ್ಲಿ ತಂಡದ ಪ್ರಧಾನ ಕೋಚ್ ಸೌಮ್ಯದೀಪ್ ರಾಯ್ ಅವರ ಸಹಾಯ ಪಡೆಯಲು ನಿರಾಕರಿಸಿದ್ದು ಏಕೆಂದರೆ ಅವರು ಅರ್ಹತಾ ಸುತ್ತಿನಲ್ಲಿ ಸೋಲುವಂತೆ ಸೂಚಿಸಿದ್ದರು ಎಂದಿದ್ದಾರೆ.
ಯಾರಾದರೂ ನನ್ನ ಬದ್ಧತೆ ಹಾಗೂ ಆಟದ ಶೈಲಿ ಬಗ್ಗೆ ಪ್ರಶ್ನಿಸಿದರೆ ಅಥವಾ ಉದ್ದೇಶಪೂರ್ವಕವಾಗಿ ಹೀಗೆ ಮಾಡು ಎಂದು ಸೂಚಿಸಿದರೆ ಆಟದ ಮೇಲಿನ ಗಮನ ಕಳೆದುಕೊಳ್ಳುತ್ತೇನೆ ಎಂದು ಮಣಿಕಾ ಬಾತ್ರಾ ಆರೋಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೋಕಿಯೊ ಪ್ಯಾರಲಿಂಪಿಕ್ಸ್: ಫೈನಲ್ ಗೆ ಲಗ್ಗೆ ಹಾಕಿದ ಕನ್ನಡಿಗ ಕೃಷ್ಣನಗರ್!