Select Your Language

Notifications

webdunia
webdunia
webdunia
webdunia

ಲಿವಿಂಗ್ ಸ್ಟೋನ್ 42 ಎಸೆತದಲ್ಲಿ ಶತಕ ವ್ಯರ್ಥ: ಪಾಕಿಸ್ತಾನಕ್ಕೆ ಜಯ

ಲಿವಿಂಗ್ ಸ್ಟೋನ್ 42 ಎಸೆತದಲ್ಲಿ ಶತಕ ವ್ಯರ್ಥ: ಪಾಕಿಸ್ತಾನಕ್ಕೆ ಜಯ
bengaluru , ಶನಿವಾರ, 17 ಜುಲೈ 2021 (16:45 IST)
ಮಧ್ಯಮ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್ ಸ್ಟೋನ್ ಸಿಡಿಸಿದ ಟಿ-20 ಇತಿಹಾಸದಲ್ಲೇ ಅತ್ಯಂತ ವೇಗದ ಶತಕ ವ್ಯರ್ಥಗೊಂಡಿತು. ಬೃಹತ್ ಮೊತ್ತದ ಗುರಿ ಬೆಂಬತ್ತಿದ ಇಂಗ್ಲೆಂಡ್ ತಂಡ 31 ರನ್ ಗಳಿಂದ ಪಾಕಿಸ್ತಾನಕ್ಕೆ ಶರಣಾಗಿದೆ.
ಶುಕ್ರವಾರ ತಡರಾತ್ರಿ ನಡೆದ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ
ದ ಪಾಕಿಸ್ತಾನ ತಂಡ 6 ವಿಕೆಟ್ ಗೆ 232 ರನ್ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಇಂಗ್ಲೆಂಡ್ 19.2 ಓವರ್ ಗಳಲ್ಲಿ 201 ರನ್ ಗಳಿಗೆ ಆಲೌಟಾಯಿತು.
ಒಂದು ಹಂತದಲ್ಲಿ 82 ರನ್ ಗೆ 4 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಲಿಯಾಮ್ ಲಿವಿಂಗ್ ಮಿಂಚಿನ ಆಟದ ಮೂಲಕ ಹೋರಾಟ ನಡೆಸಿದರು. ಲಿವಿಂಗ್ 43 ಎಸೆತಗಳಲ್ಲಿ 6 ಬೌಂಡರಿ ಹಾಗೂ 9 ಸಿಕ್ಸರ್ ನೆರವಿನಿಂದ 103 ರನ್ ಬಾರಿಸಿ ಏಕಾಂಗಿ ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಪಾಕಿಸ್ತಾನ ಪರ ನಾಯಕ ಬಾಬರ ಅಜಮ್ ಮತ್ತು ಮೊಹಮದ್ ರಿಜ್ವಾನ್ ಮೊದಲ ವಿಕೆಟ್ ಗೆ 150 ರನ್ ಜೊತೆಯಾಟದ ಮೂಲಕ ಮಿಂಚಿನ ಆರಂಭ ನೀಡಿದರು. ಬಾಬರ್ 49 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ಸೇರಿದ 85 ರನ್ ಗಳಿಸಿದರೆ, ರಿಜ್ವಾನ್ 65 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 63 ರನ್ ಸಿಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ದ್ರಾವಿಡ್ ಹುಡುಗರಿಗೆ ರಿಯಲ್ ಟೆಸ್ಟ್ ನಾಳೆಯಿಂದ ಶುರು